ಎಂಆರ್‌ಎಂಸಿ ವೈದ್ಯರ ಧರಣಿ

7

ಎಂಆರ್‌ಎಂಸಿ ವೈದ್ಯರ ಧರಣಿ

Published:
Updated:
ಎಂಆರ್‌ಎಂಸಿ ವೈದ್ಯರ ಧರಣಿ

ಗುಲ್ಬರ್ಗ: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿ (ಎಐಸಿಟಿಇ)ಯಂತೆ ಪರಿಷ್ಕೃತ ವೇತನ ನೀಡಬೇಕು. 2009ರ ಆದೇಶದಂತೆ ಗ್ರಾಚ್ಯುಟಿ ಹೆಚ್ಚಿಸಬೇಕು ಹಾಗೂ ರಜಾ ಸೌಲಭ್ಯ ಹೆಚ್ಚಳ ಮಾಡಬೇಕು ಎಂದು ಎಚ್‌ಕೆಇ ವ್ಯವಸ್ಥಾಪಕ ಮಂಡಳಿಯನ್ನು ಆಗ್ರಹಿಸಿ ಮಹಾದೇವ ರಾಂಪುರೆ ವೈದ್ಯಕೀಯ ಕಾಲೇಜಿನ ಉಪನ್ಯಾಸಕರ ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು ಕೆಲಸ ಸ್ಥಗಿತಗೊಳಿಸಿ ಸೋಮವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.ಬೇಡಿಕೆ ಈಡೇರಿಸುವ ತನಕ ಧರಣಿ ಮುಂದುವರಿಸಲು ಶಿಕ್ಷಕರ ಒಕ್ಕೂಟದ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಬಸವೇಶ್ವರ ಆಸ್ಪತ್ರೆಯಲ್ಲಿ ಒಪಿಡಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸೋಮವಾರದಿಂದ ಕೆಲಸ ಸ್ಥಗಿತಗೊಳಿಸಲಾಗಿದೆ. ತುರ್ತು ಸೇವೆಗೆ ಯಾವುದೇ ತೊಂದರೆಯಿಲ್ಲ. ಎಂಆರ್‌ಎಂಸಿ ಕಾಲೇಜಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪಾಠ ಪ್ರವಚನ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಒಂದು ವಾರದಿಂದ ಕೈಗೆ ಕಪ್ಪುಪಟ್ಟಿ ಧರಿಸಿ ಗಮನ ಸೆಳೆಯಲಾಯಿತು. ಇದೀಗ 8ರ ವರೆಗೂ ಪ್ರತಿಭಟನಾ ಧರಣಿ ನಡೆಸಲಾಗುವುದು. 8ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದರು.ಡಾ. ನಾಗೇಂದ್ರ ಮಂಠಾಳೆ, ಡಾ. ಅಜಯ ಗುಡುರ, ಡಾ. ಉಮೇಶ ಎಸ್.ಆರ್., ಡಾ. ಎಂ.ಎಸ್. ತೆಗನೂರ, ಡಾ. ಕಿರಣ ದೇಶಮುಖ, ಡಾ. ಎಸ್.ಎಸ್. ಕಾರಭಾರಿ, ಡಾ. ಶರಣಗೌಡ ಪಾಟೀಲ, ಡಾ. ಸಂತೋಷ ಪಾಟೀಲ, ಡಾ. ಗಿರೀಶ ದೇಸಾಯಿ, ಡಾ. ರಾಜೇಶ ಪಾಟೀಲ, ಡಾ. ಸುನೀಲ ಬಿರಾದಾರ, ಡಾ. ಕಿರಣಕುಮಾರ ಅಕ್ಕಾ, ಡಾ. ನಿಶಾಂತ ಪಾಣೆಗಾಂವ, ಡಾ. ಗುರುಲಿಂಗಪ್ಪ ಪಾಟೀಲ, ಡಾ. ಸಂಜೀವ ಎಂ. ಪಾಟೀಲ, ಡಾ. ಆನಂದ ಕಣಕಿ, ಡಾ. ಬೊರಮ್ಮಾ, ಶೀಬಾ ಪ್ರವೀಣ, ಡಾ. ಎಸ್.ಎಸ್. ಗುಬ್ಬಿ, ಡಾ. ಜಿ. ವೀರಣ್ಣಾ, ಡಾ. ಶ್ರೀಕಾಂತ, ಡಾ. ಅನಿಲ, ಡಾ. ಇಂದಿರಾ ವೀರಭದ್ರಪ್ಪ, ಡಾ. ವಿನೋದ ವಾಲಿ, ಡಾ. ರಾಜೇಶ ಪಾಟೀಲ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry