ಸೋಮವಾರ, ಜನವರಿ 27, 2020
28 °C

ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಕಾರ್ಮಿಕ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರತ್ಕಲ್: ಎಂಆರ್‌ಪಿಎಲ್-ಓಎನ್‌ಜಿಸಿ 2ನೇ ಘಟಕದಲ್ಲಿ ಶನಿವಾರ ಸಂಭವಿಸಿದ ಸ್ಫೋಟಕ್ಕೆ ಒಬ್ಬ ಕಾರ್ಮಿಕ ಬಲಿಯಾಗಿದ್ದು, ಎಂಆರ್‌ಪಿಎಲ್‌ನ ಒಬ್ಬ ಉದ್ಯೋಗಿ ಸೇರಿ ಐವರು ತೀವ್ರವಾಗಿ ಗಾಯಗೊಂಡಿದ್ದಾರೆ.ಕುಳಾಯಿಯ ನಾಗೇಶ್ (33) ಮೃತ ಕಾರ್ಮಿಕ. ಇವರು ಇಂಟೆಕ್ ಎಂಜಿನಿಯರ್ಸ್‌ ಕಂಪೆನಿಯ ಗುತ್ತಿಗೆ ಕಾರ್ಮಿಕ.  ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಎಂಆರ್‌ಪಿಎಲ್ ಸಲ್ಫರ್ ರಿಕವರಿ ಯೂನಿಟ್ ಪ್ಲಾಂಟ್ ಎರಡರಲ್ಲಿ ಕಚ್ಚಾತೈಲದ ತ್ಯಾಜ್ಯ ನಿರ್ವಹಣಾ ಘಟಕದ ಮೇಲ್ಭಾಗದಲ್ಲಿ ವೆಲ್ಡಿಂಗ್ ಮಾಡುತ್ತಿದ್ದಾಗ ಸ್ಫೋಟ ಸಂಭವಿಸಿದೆ.

ಪ್ರತಿಕ್ರಿಯಿಸಿ (+)