ಎಂಆರ್‌ಪಿಎಲ್: 314 ಕೋಟಿ ಲಾಭ

7

ಎಂಆರ್‌ಪಿಎಲ್: 314 ಕೋಟಿ ಲಾಭ

Published:
Updated:ನವದೆಹಲಿ (ಪಿಟಿಐ): ಮಂಗಳೂರು ತೈಲಾಗಾರ ಮತ್ತು ಪೆಟ್ರೊಕೆಮಿಕಲ್ ಲಿಮಿಟೆಡ್ (ಎಂಆರ್‌ಪಿಎಲ್), ಡಿಸೆಂಬರ್ ತಿಂಗಳ ಅಂತ್ಯಕ್ಕೆ ಕೊನೆಗೊಂಡ 3ನೇ ತ್ರೈಮಾಸಿಕ ಅವಧಿಯಲ್ಲಿ  ್ಙ 313 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.ಅಕ್ಟೋಬರ್ - ಡಿಸೆಂಬರ್ ತ್ರೈಮಾಸಿಕ ಅವಧಿಯಲ್ಲಿನ ನಿವ್ವಳ ಲಾಭವು ್ಙ 313.76 ಕೋಟಿಗಳಷ್ಟಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿನ ್ಙ 259.54 ಕೋಟಿಗಳಿಗೆ ಹೋಲಿಸಿದರೆ ಶೇ 21ರಷ್ಟು ಹೆಚ್ಚಳ ಸಾಧಿಸಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಯು. ಕೆ. ಬಸು, ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಅವಧಿಯಲ್ಲಿ ಸಂಸ್ಥೆಯ ರಫ್ತು ವಹಿವಾಟು  ಶೇ 16ರಷ್ಟು ಹೆಚ್ಚಳಗೊಂಡು ್ಙ 4,046 ಕೋಟಿಗಳಷ್ಟು ಆಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry