ಎಂಇಜಿಗೆ ಮಣಿದ ಡಿವೈಎಸ್‌ಎಸ್

7

ಎಂಇಜಿಗೆ ಮಣಿದ ಡಿವೈಎಸ್‌ಎಸ್

Published:
Updated:

ಬೆಂಗಳೂರು: ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) ತಂಡದವರು ಚೊಚ್ಚಲ ಕರ್ನಾಟಕ ವಾಲಿ ಲೀಗ್ (ಕೆವಿಎಲ್) ಮೂರನೇ ಆವೃತ್ತಿಯ ಬುಧವಾರದ ಪಂದ್ಯದಲ್ಲಿ 22-25, 27-29, 25-20, 25-12, 16-14ರಲ್ಲಿ ಡಿವೈಎಸ್‌ಎಸ್ ತಂಡವನ್ನು ಮಣಿಸಿದರು.ಮುನ್ಸಿಪಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಟೂರ್ನಿಯ ಪಂದ್ಯದಲ್ಲಿ ವಿಜಯಿ ತಂಡದ ಬಿಪಿನ್ ಉತ್ತಮ ಪ್ರದರ್ಶನ ನೀಡಿದರು. ಮೊದಲ ಮೂರು ಪಂದ್ಯಗಳಲ್ಲಿ ಸೋಲು ಕಂಡಿದ್ದ ಎಂಇಜಿ ಈ ಗೆಲುವಿನ ಮೂಲಕ ಎರಡು ಅಂಕಗಳನ್ನು ಕಲೆ ಹಾಕಿತು.ಇನ್ನೊಂದು ಪಂದ್ಯದಲ್ಲಿ ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್‌ಎಲ್) ತಂಡ 25-20, 25-21, 25-23ರಲ್ಲಿ ಎಎಸ್‌ಸಿ ವಿರುದ್ಧ ಗೆಲುವು ದಾಖಲಿಸಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry