ಎಂಇಜಿ ತಂಡ ಚಾಂಪಿಯನ್ಸ್

7

ಎಂಇಜಿ ತಂಡ ಚಾಂಪಿಯನ್ಸ್

Published:
Updated:

ಬೆಂಗಳೂರು: ರಾಜ್ಯದ ಪ್ರಮುಖ ತಂಡಗಳಲ್ಲಿ ಒಂದಾದ ಎಂ.ಇ.ಜಿ. ತಂಡದವರು ಬೆಂಗಳೂರು ಕೊಡವ ಸಮಾಜ ಆಶ್ರಯದ ಹದಿನಾಲ್ಕನೇ ವಾರ್ಷಿಕ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ರಾಜ್ಯಮಟ್ಟದ ಹಾಕಿ ಟೂರ್ನಿ ಪ್ರಶಸ್ತಿ ಗೆದ್ದುಕೊಂಡರು.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ಟೂರ್ನಿ ಫೈನಲ್‌ನಲ್ಲಿ ಎಂ.ಇ.ಜಿ. ತಂಡದವರು 4-3 ಗೋಲುಗಳಿಂದ ತರುಣ ಆಟಗಾರರನ್ನೊಳಗೊಂಡ ಭಾರತ ಕ್ರೀಡಾ ಪ್ರಾಧಿಕಾರ ತಂಡದ ಮೇಲೆ ಪ್ರಯಾಸದ ಜಯ ಪಡೆದರು.ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಎಂ.ಇ.ಜಿ. ತಂಡದವರು ಜಯಗಳಿಸಲು ಹೆಚ್ಚು ಬೆವರು ಸುರಿಸಬೇಕಾಯಿತು. ವಿಜಯಿ ತಂಡದ ಸಿರಾಜ್ ಎರಡು ಗೋಲುಗಳಿಸಿ ತಮ್ಮ ತಂಡದ ಗೆಲುವಿನ ರೂವಾರಿ ಆದರು. ದಾಳಿಗೆ ಪ್ರತಿದಾಳಿ ನಡೆಸಿದ ಕ್ರೀಡಾ ಪ್ರಾಧಿಕಾರ ತಂಡದ ಮುನ್ಪಡೆ ಆಟಗಾರರು ಪ್ರೇಕ್ಷಕರ ಮನಗೆದ್ದರು.ಎಂಇಜಿ ತಂಡದ ಮುತ್ತಣ್ಣ, ಸಿರಾಜ್ (2), ಸಗಯ ಜಯಶೀಲನ್ ಹಾಗೂ ಕ್ರೀಡಾ ಪ್ರಾಧಿಕಾರ ತಂಡದ ದೀಪಕ್ ಬಿಜ್‌ವಾದ್, ಬಿಜು, ಎಸ್.ಕೆ. ಉತ್ತಪ್ಪ ಚೆಂಡನ್ನು ಗುರಿಮುಟ್ಟಿಸಿದರು.ಇದಕ್ಕೆ ಮೊದಲು ನಡೆದ ಇನ್ನೊಂದು ಸೆಮಿಫೈನಲ್ ಲೀಗ್‌ನಲ್ಲಿ ಎ.ಎಸ್.ಸಿ. ತಂಡ 4-1 ಗೋಲುಗಳಿಂದ ಕೆನರಾ ಬ್ಯಾಂಕ್ ತಂಡವನ್ನು ಸೋಲಿಸಿದರು.

ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ವಿಜಯಿ ತಂಡದ ರವಾಬೇಂಗ್ರ, ಫೆರೋಜ್, ದೀಪು (2) ಹಾಗೂ ಬ್ಯಾಂಕ್ ತಂಡದ ಸುನಿಲ್ ಬೆಂಜಮಿನ್ ಗೋಲು ತಂದಿತ್ತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry