ಎಂಎನ್‌ಪಿ:ಬೇಡಿಕೆ ಹೆಚ್ಚಳ

7

ಎಂಎನ್‌ಪಿ:ಬೇಡಿಕೆ ಹೆಚ್ಚಳ

Published:
Updated:

ನವದೆಹಲಿ (ಐಎಎನ್‌ಎಸ್): ಸುಪ್ರೀಂಕೋರ್ಟ್ 2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ 122 ಪರವಾನಗಿಗಳನ್ನು ರದ್ದುಗೊಳಿಸಿರುವ ಬೆನ್ನಲ್ಲೆ, ಕೆಲವು ದೂರವಾಣಿ ಕಂಪೆನಿಗಳು `ಮೊಬೈಲ್ ನಂಬರ್ ಫೋರ್ಟಬಿಲಿಟಿ~ (ಎಂಎನ್‌ಪಿ) ಮೂಲಕ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಮುಂದಾಗಿವೆ.ದೇಶದ ಮುಂಚೂಣಿ  ದೂರವಾಣಿ ಸೇವಾಸಂಸ್ಥೆಗಳಲ್ಲಿ ಒಂದಾದ `ವೋಡಾಫೋನ್~ ಕೋರ್ಟ್ ತೀರ್ಪು ಹೊರಬಿದ್ದ ಮರುದಿನದಿಂದಲೇ `ಸರ್ವರಿಗೂ ಸ್ವಾಗತ~ ಎನ್ನುವ ಜಾಹೀರಾತು ಆಂದೋಲನ ಪ್ರಾರಂಭಿಸಿದೆ. ನಿಮ್ಮ ಮೊಬೈಲ್ ಸಂಖ್ಯೆಯನ್ನು ಬದಲಿಸದೆ `ಎಂಎನ್‌ಪಿ~ ಮೂಲಕ ನಮ್ಮ ಸೇವಾ ವಲಯಕ್ಕೆ ಬನ್ನಿ ಎನ್ನುವ ಆಹ್ವಾನ ನೀಡುತ್ತಿದೆ.`2ಜಿ ತೀರ್ಪಿನ ಹಿನ್ನೆಲೆಯಲ್ಲಿ ಕೆಲವು ಆಯ್ದ ವೃತ್ತಗಳಲ್ಲಿ ಗ್ರಾಹಕರಿಂದ `ಎಂಎನ್‌ಪಿ~ ಬೇಡಿಕೆ ಹೆಚ್ಚಬಹುದು ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಹೇಳಿದೆ.ಐಡಿಯಾ,ಯುನಿನಾರ್,ಟಾಟಾ ಟೆಲಿಸರ್ವೀಸಸ್ ಸೇರಿದಂತೆ  ಪರವಾನಗಿ ರದ್ದುಗೊಂಡಿರುವ ಕಂಪೆನಿಗಳಿಂದ ಸುಮಾರು 50 ದಶಲಕ್ಷದಷ್ಟು ಗ್ರಾಹಕರು ಸೇವಾ ಸಂಸ್ಥೆ ಬದಲಿಸಬಹುದು ಎಂದು `ಟ್ರಾಯ್~ ಅಂದಾಜಿಸಿದೆ.ಗರಿಷ್ಠ ಲಾಭ: ದೇಶದ ಮುಂಚೂಣಿ ಮೊಬೈಲ್ ದೂರವಾಣಿ ಸೇವಾ ಸಂಸ್ಥೆ `ಏರ್‌ಟೆಲ್~ ಪರವಾನಗಿಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ಎದುರಿಸುತ್ತಿಲ್ಲ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಕಂಪೆನಿ `ಎಂಎನ್‌ಪಿ~ ಮೂಲಕ ಗರಿಷ್ಠ ಲಾಭ ಪಡೆದುಕೊಳ್ಳಬಹುದು ಎಂದು ದೂರಸಂಪರ್ಕ ವಿಶ್ಲೇಷಕ ಮತ್ತು ಕಾಂ ಫಸ್ಟ್ ಇಂಡಿಯಾದ ನಿರ್ದೇಶಕ ಮಹೇಶ್ ಉಪಾಲ್ ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry