ಎಂಎಫ್ ವಹಿವಾಟಿಗೆ ಹೊಸ ತಾಣ

7

ಎಂಎಫ್ ವಹಿವಾಟಿಗೆ ಹೊಸ ತಾಣ

Published:
Updated:

ಮುಂಬೈ (ಪಿಟಿಐ): ಮ್ಯೂಚುವಲ್ ಫಂಡ್ (ಎಂಎಫ್) ವಹಿವಾಟಿಗೆ ನೆರವಾಗಲು ಭಾರತದ ಮ್ಯೂಚುವಲ್ ಫಂಡ್‌ಗಳ ಸಂಘವು (ಎಎಂಎಫ್‌ಐ) ಮುಂದಿನ ವರ್ಷ ಹೊಸ ಇಂಟರ್‌ನೆಟ್ ತಾಣ ಆರಂಭಿಸಲು ನಿರ್ಧರಿಸಿದೆ.ಹಲವಾರು ಸಂಪತ್ತು ನಿರ್ವಹಣಾ ಸಂಸ್ಥೆಗಳು (ಮ್ಯೂಚುವಲ್ ಫಂಡ್)   ಹಣ ಹೂಡಿಕೆಗೆ ಒದಗಿಸುವ ಹಲವಾರು ಯೋಜನೆಗಳಲ್ಲಿ ಗ್ರಾಹಕರು, ವಿತರಕರು ಮತ್ತು ಹಣಕಾಸು ಸಲಹೆಗಾರರು ಒಂದೆಡೆಯೇ ವಹಿವಾಟು ನಡೆಸಲು ಈ `ಎಂಎಫ್ ಯುಟಿಲಿಟಿ~  ಇಂಟರ್‌ನೆಟ್ ತಾಣವು ಅವಕಾಶ ಕಲ್ಪಿಸಿಕೊಡಲಿದೆ.

2012ರ ಏಪ್ರಿಲ್ ಮೊದಲ ವಾರದಲ್ಲಿ ಈ ತಾಣವು ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಇದಕ್ಕೆ ಅನುಮತಿ ನೀಡಬೇಕಾಗಿದೆ  ಎಂದು `ಎಂಎಂಎಫ್‌ಐ~ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್. ಎನ್. ಸಿನೊರ್ ಹೇಳಿದ್ದಾರೆ.ಇಲ್ಲಿ ನಡೆದ `ಎಎಂಎಫ್‌ಐ~ನ 16ನೇ  ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಮ್ಯೂಚುವಲ್ ಫಂಡ್ ಉದ್ದಿಮೆಯ ಬೆಳವಣಿಗೆ, ಸಾಮಾನ್ಯ ಹೂಡಿಕೆದಾರರ ಪಾಲ್ಗೊಳ್ಳುವಿಕೆ ಮತ್ತು ಸಣ್ಣ ಪಟ್ಟಣಗಳಲ್ಲಿನ ಹೂಡಿಕೆದಾರರಿಗೆ  `ಎಂಎಫ್~ ಯೋಜನೆಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ಮೂಡಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.`ಆರ್ಥಿಕ ಸಾಕ್ಷರತೆಯು ರಾತ್ರಿ ಬೆಳಗಾಗುವುದರೊಳಗೆ ಬರುವುದಿಲ್ಲ. ಇಂತಹ ಪ್ರಯತ್ನಗಳನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗಬೇಕು. ಹಣ ಹೂಡಿಕೆ ಮಾಡುವ ಜನಸಾಮಾನ್ಯರಲ್ಲಿ ವಿಶ್ವಾಸ ಮೂಡಿಸಿದರೆ ಮಾತ್ರ ಈ ಉದ್ದಿಮೆ ಬೆಳೆಯಬಲ್ಲದು~ ಎಂದು ಸಿನೊರ್ ನುಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry