ಎಂ.ಎಲ್.ಚಂದ್ರಶೇಖರ್ ನಿಧನ

7

ಎಂ.ಎಲ್.ಚಂದ್ರಶೇಖರ್ ನಿಧನ

Published:
Updated:

ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ ಎಂ.ಎಲ್. ಚಂದ್ರಶೇಖರ್ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು.ಮದ್ದೂರಿನ ಚಂದ್ರಶೇಖರ್ ಅವರು 1946ರಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ ಇಲಾಖೆಗೆ ಸೇರಿದ್ದರು. ನಂಜನಗೂಡು ಮತ್ತು ತಿಪಟೂರಿನಲ್ಲಿ ಅವರು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.ಚಿತ್ರದುರ್ಗ, ಬೆಳಗಾವಿ ಧಾರವಾಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿಯೂ ಅವರು ಕೆಲಸ ಮಾಡಿದ್ದರು.ಅಗ್ನಿಶಾಮಕ ಮತ್ತು ಗೃಹ ರಕ್ಷಕ ದಳದ ಐಜಿಪಿ ಮತ್ತು ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು.ಅವರ ಅಂತ್ಯಕ್ರಿಯೆ ವಿಲ್ಸನ್ ಗಾರ್ಡನ್‌ನಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಭಾನುವಾರ ನಡೆಯಲಿದೆ.

ಸಿಎಂ ಸಂತಾಪ: ಚಂದ್ರಶೇಖರ್ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ  ಸಂತಾಪ ಸೂಚಿಸಿದ್ದಾರೆ. ಅವರು ಶಿಸ್ತಿನ ಅಧಿಕಾರಿ ಎಂದೇ ಅವರು ಇಲಾಖೆಯಲ್ಲಿ ಖ್ಯಾತರಾಗಿದ್ದರು.      

      

ಜನಾನುರಾಗಿಯಾಗಿದ್ದ ಅವರು ಸರಳ ನಡೆ- ನುಡಿಯಿಂದ ಜನರ ಪ್ರೀತಿಗೆ ಪಾತ್ರರಾಗಿದ್ದರು ಎಂದು ಸದಾನಂದಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸಿ.ವಿ.ಗಿಡ್ಡಪ್ಪ

ಬೆಂಗಳೂರು: ಭಾರತೀಯ ಕ್ರೆಡಿಟ್‌ಕಾರ್ಡ್‌ದಾರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ವಿ.ಗಿಡ್ಡಪ್ಪ  (55) ಹೃದಯಾಘಾತದಿಂದ ಶನಿವಾರ ಸಂಜೆ ನಗರದ ಮಲ್ಯ ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ಪತ್ನಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ. ಭಾನುವಾರ ಸಂಜೆ 4 ಗಂಟೆಗೆ ಮೈಸೂರು ರಸ್ತೆಯಲ್ಲಿರುವ ಸ್ಮಶಾನದಲ್ಲಿ ಅಂತ್ಯಕ್ರಿಯೆ ಜರುಗಲಿದೆ. ಸಂಪರ್ಕ- 93412 61962.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry