ಎಂಎಸ್‌ಆರ್ ಕ್ವಿಜ್ ಗೆದ್ದವರು

7

ಎಂಎಸ್‌ಆರ್ ಕ್ವಿಜ್ ಗೆದ್ದವರು

Published:
Updated:
ಎಂಎಸ್‌ಆರ್ ಕ್ವಿಜ್ ಗೆದ್ದವರು

ಎಂ.ಎಸ್. ರಾಮಯ್ಯ ತಾಂತ್ರಿಕ ವಿದ್ಯಾಲಯದ ಸುವರ್ಣ ಮಹೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಅಂತರ್ ಕಾಲೇಜು ಸೈನ್ಸ್ ಕ್ವಿಜ್ ನಡೆಯಿತು.ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ಹಿಮಾದ್ರಿ ಬ್ಯಾನರ್ಜಿ ಮತ್ತು ಎ. ಅಕ್ಷತ್ ಪ್ರಥಮ ಸ್ಥಾನದೊಂದಿಗೆ 30 ಸಾವಿರ  ನಗದು ಬಹುಮಾನಕ್ಕೆ ಪಾತ್ರರಾದರು. ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಸಂಕರ್ಷಣ ಮತ್ತು ಎಸ್. ಶ್ರೀಹರಿ (20 ಸಾವಿರ ರೂ) ಎರಡನೇ ಬಹುಮಾನ, ಎಂಎಸ್‌ಆರ್‌ಐಟಿಯ ನಿಖಿಲ್ ಆಚಾರ್ಯ, ನಕುಲ್ ಶೆಟ್ಟಿ ಮೂರನೇ ಬಹುಮಾನ ಗೆದ್ದುಕೊಂಡರು.ರಾಜ್ಯದ ವಿವಿಧೆಡೆಯ ಎಂಜಿನಿಯರಿಂಗ್, ವಿಜ್ಞಾನ ಕಾಲೇಜುಗಳ 150 ತಂಡಗಳು ಕ್ವಿಜ್‌ನಲ್ಲಿ ಭಾಗವಹಿಸಿದ್ದವು. ಪ್ರತಿ ಕಾಲೇಜಿನಿಂದ ಇಬ್ಬರು ವಿದ್ಯಾರ್ಥಿಗಳಿಗೆ ಅವಕಾಶವಿತ್ತು. ಮೂಲವಿಜ್ಞಾನ ಮತ್ತು ತಂತ್ರಜ್ಞಾನ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಹಾಗೂ ಸಂಶೋಧನೆ ಕ್ಷೇತ್ರದಲ್ಲಿ ಮುಂದುವರಿಯಲು ಬಯಸುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿತ್ತು.ಎಂಎಸ್‌ಆರ್ ಶಿಕ್ಷಣ ಸಮೂಹದ ನಿರ್ದೇಶಕ ಎಂ.ಆರ್. ಸೀತಾರಾಂ ಪ್ರಶಸ್ತಿ ಪ್ರದಾನ ಮಾಡಿದರು. ಜಿಇಎಫ್‌ನ ನಿರ್ವಹಣಾ ಅಧಿಕಾರಿ ಎಸ್.ಎಂ. ಆಚಾರ್ಯ, ಕೆ.ಎಸ್.ರಾಜನಂದಮ್, ಜಿ.ಕೆ. ರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry