ಎಂಎಸ್‌ಎಂಇ ಡಿಫೆಕ್ಸ್‌ಪೋ ಮಾರ್ಚ್ 2ರಿಂದ ಆರಂಭ

7

ಎಂಎಸ್‌ಎಂಇ ಡಿಫೆಕ್ಸ್‌ಪೋ ಮಾರ್ಚ್ 2ರಿಂದ ಆರಂಭ

Published:
Updated:

`ಬೆಂಗಳೂರು:  `ಕರ್ನಾಟಕ ಸರ್ಕಾರ, ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮ ಮತ್ತು ಕರ್ನಾಟಕ ಕೈಗಾರಿಕಾ ಒಕ್ಕೂಟಗಳು ಅಂತರರಾಷ್ಟ್ರೀಯ ಮಟ್ಟದ ರಕ್ಷಣೆ, ಬಾಹ್ಯಾಕಾಶ ಮತ್ತು ಇತರೆ ವಿಭಾಗಗಳ `ಎಂಎಸ್‌ಎಂಇ ಡಿಫೆಕ್ಸ್‌ಪೋ-2012~ ಪ್ರದರ್ಶನವನ್ನು ನಗರದ ಅರಮನೆ ಮೈದಾನದಲ್ಲಿ ಮಾರ್ಚ್ 2 ರಿಂದ 4 ರವರೆಗೆ ಏರ್ಪಡಿಸಿವೆ~ ಎಂದು ನಿಗಮದ ಆಯುಕ್ತ  ಉದಯಕುಮಾರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ಮೇಜರ್ ಜನರಲ್ ಶ್ರೀವಾಸ್ತವ, ಕಮಾಂಡರ್ ರಾಣಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಪ್ರದರ್ಶನದಲ್ಲಿ ಭಾರತೀಯ ಸೇನೆಯಿಂದ ಸೆಲ್ಫ್ ಪ್ರಪೊಲ್ಡ್ ಗನ್ಸ್, ಮೌಂಟೆಡ್ ಗನ್ ಸಿಸ್ಟಮ್ಸ, ಮಲ್ಟಿ ಟೆರಿಯನ್ ವೆಹಿಕಲ್ಸ್, ರಾಕೆಟ್ ಲಾಂಚರ್, ಏರ್ ಮೊಬೈಲ್ ಅಲ್ಟ್ರಾ ಲೈಟ್ ಹೌಟರ್ಸ್‌, ಟ್ಯಾಂಕರ್‌ಗಳು ಪ್ರದರ್ಶನಗೊಳ್ಳಲಿವೆ.ಭಾರತೀಯ ನೌಕಾಯಾನದಿಂದ 103 ಯುದ್ಧ ಹಡಗುಗಳು, ಸಬ್‌ಮೆರಿನ್ಸ್ ನವಾಲ್ ಹೆಲಿಕಾಪ್ಟರ್ಸ್‌, ಏರ್‌ಕ್ರಾಫ್ಟ್ ಕ್ಯಾರೀಸ್, ಡೆಸ್ಟ್ರಾಯರ್ಸ್‌, ನವಾಲ್ ಏರ್‌ಕ್ರಾಫ್ಟ್ ಮುಂತಾದವುಗಳನ್ನು ಪ್ರದರ್ಶಿಸಲಾಗುವುದು. 180 ಸುಖೋಯಿ ಸು-30 ಎಂಕೆಐ ಏರ್ ಕ್ರಾಫ್ಟ್, ವಾಯು ಸೇನೆಯ ಮಿಗ್ 21, 120 ಇಂಡಿಯಾ ತೇಜಸ್ ಯುದ್ಧ ವಿಮಾನಗಳು, ಜೆಟ್ ತರಬೇತಿ ವಿಮಾನಗಳು, 5ನೇ ಪೀಳಿಗೆಯ  ಯುದ್ಧ ವಿಮಾನಗಳು ಮುಂತಾದವುಗಳು ಪ್ರದರ್ಶನಗೊಳ್ಳಲಿವೆ~ ಎಂದರು. `ಜಾಗತಿಕ ಮಟ್ಟದಲ್ಲಿ ಸ್ಥಳೀಯ ಶಕ್ತಿಯ ಬಗ್ಗೆ ವಿಚಾರ ಸಂಕಿರಣವೂ ನಡೆಯಲಿದೆ. ಉಪಕರಣಗಳ ಕೊಂಡು ಕೊಳ್ಳುವರಿಗಾಗಿ ತಾಂತ್ರಿಕ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ~ ಎಂದು ಹೇಳಿದರು.`ಭೂ ಸೇನೆ, ನೌಕಾಯಾನ ಮತ್ತು ವಾಯು ಸೇನೆಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಸ್ಟಾರ್ ಡಿಫೆನ್ಸ್ ಐಎಐ, ಎಲ್‌ಬಿಟ್, ಸಾಬ್, ಬೋಯಿಂಗ್, ಹನಿವೆಲ್, ಲಾಕ್‌ಹಿಡ್ ಮಾರ್ಟಿನ್ ಇವುಗಳಲ್ಲದೆ ರಕ್ಷಣಾ ಉದ್ಯಮಿಗಳಾದ ಬಿಇಎಲ್, ಎನ್‌ಎಎಲ್, ಇಸ್ರೊ ಮೊದಲಾದವುಗಳು ಪಾಲ್ಗೊಳ್ಳಲಿವೆ~ ಎಂದರು.

`ಅಮೆರಿಕ, ಇಂಗ್ಲೆಂಡ್, ಇಸ್ರೇಲ್, ಮೊದಲಾದ ದೇಶಗಳು ಭಾಗವಹಿಸಲಿವೆ. ಸುಮಾರು 10,000 ಮಂದಿ ಸೇರುವ ನಿರೀಕ್ಷೆಯಿದೆ~ ಎಂದರು. ಗೋಷ್ಠಿಯಲ್ಲಿ ಗೌರವ ಕಾರ್ಯದರ್ಶಿ ರವಿಕುಮಾರ್, ನಿರ್ದೇಶಕ ಮಹೇಶ್‌ರಾವ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry