ಎಂಎಸ್‌ಐಎಲ್ ಅಧಿಕಾರಿ ಲೋಕಾಯುಕ್ತ ಬಲೆಗೆ

7

ಎಂಎಸ್‌ಐಎಲ್ ಅಧಿಕಾರಿ ಲೋಕಾಯುಕ್ತ ಬಲೆಗೆ

Published:
Updated:

ಹಾಸನ: ಮದ್ಯ ಮಾರಾಟ ಮಳಿಗೆ ಯಿಂದ ಹತ್ತು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಎಂ.ಎಸ್.ಐ.ಎಲ್‌ನ ಹಾಸನ ಜಿಲ್ಲಾ ಸಂಪರ್ಕ ಅಧಿಕಾರಿ ಎಂ.ಕೆ. ನಾಗರಾಜ ಅವರು ಗುರುವಾರ ರಾತ್ರಿ ಲೋಕಾಯುಕ್ತ ಪೊಲೀಸರ  ಬಲೆಗೆ ಬಿದ್ದಿದ್ದಾರೆ.ನಗರದಲ್ಲಿರುವ ಮೂರು ಎಂ.ಎಸ್.ಐ.ಎಲ್ ಮದ್ಯ ಮಾರಾಟ ಮಳಿಗೆ ಗಳಲ್ಲಿ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ಬೆಲೆಗೆ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಬಂದಿದ್ದು, ಅದನ್ನು ನಿಯಂತ್ರಿಸ ಬೇಕಾಗಿದ್ದ ನಾಗರಾಜು ಅದರಲ್ಲಿ ಪಾಲು ಕೇಳಲು ಹೋದಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.`ಚಿಲ್ಲರೆ ಕೊರತೆಯಿಂದಾಗಿ ಈ ಮಳಿಗೆಗಳಲ್ಲಿ ಮದ್ಯ ಮಾರಾಟ ಮಾಡುವಾಗ ಒಂದೆರಡು ರೂಪಾಯಿ ಹೆಚ್ಚು ಪಡೆಯಲಾಗುತ್ತಿತ್ತು. ಪ್ರತಿದಿನ ಇಂಥ ಹಣವೇ ಹಲವು ಸಾವಿರ ರೂಪಾಯಿಯಾಗುತ್ತಿತ್ತು. ಈ ಹಣ ದಲ್ಲಿ ಪ್ರತಿ ಮಳಿಗೆಯಿಂದ ತನಗೆ ತಲಾ ಹತ್ತು ಸಾವಿರ ರೂಪಾಯಿ ನೀಡಬೇಕು ಎಂದು ನಾಗರಾಜು ಒತ್ತಾಯಿಸಿದ್ದರು. ಈ ವಿಚಾರವನ್ನು ಮಳಿಗೆಯ ವ್ಯವ ಸ್ಥಾಪಕ ಟಿ.ಕೆ. ಮಂಜುನಾಥ್ ಲೋಕಾ ಯುಕ್ತ ಪೊಲೀಸರಿಗೆ ತಿಳಿಸಿದ್ದರು. ಗುರುವಾರ ರಾತ್ರಿ ಹಣ ಪಡೆಯಲು ಮಳಿಗೆಗೆ ಬಂದಿದ್ದ ನಾಗರಾಜು ಅವರನ್ನು ಪೊಲೀಸರು ಬಂಧಿಸಿದ್ದಾರೆ.ಚಿನ್ನಾಭರಣ ಕಳವು

ಮನೆಯ ಬೀಗ ಮುರಿದು ಸುಮಾರು 24ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಹಾಸನದ ರಾಜಘಟ್ಟದಲ್ಲಿ ಗುರುವಾರ ನಡೆದಿದೆ.ಇಲ್ಲಿನ ಸಣ್ಣೇಗೌಡ ಎಂಬುವವರು ಮನೆಗೆ ಬೀಗ ಹಾಕಿಕೊಂಡು ಸಾತೇನಹಳ್ಳಿಯಲ್ಲಿರುವ ತಮ್ಮಮಗಳ ಮನೆಗೆ ಹೋಗಿದ್ದರು. ಶುಕ್ರವಾರ ಬೆಳಿಗ್ಗೆ ಮನೆಗೆ ಮರಳಿದಾಗ ಕಳ್ಳತನ ನಡೆದಿರುವುದು ಪತ್ತೆಯಾಗಿದೆ.ಮನೆಯ ಬೀಗನವನ್ನು ಮುರಿದು ಒಳಪ್ರವೇಶಿಸಿದ ಕಳ್ಳರು ಬೀರು ವಿನಲ್ಲಿಟ್ಟಿದ್ದ ಚಿನ್ನದ ಓಲೆ, ಬೆಳ್ಳಿಯ ಕುಂಕುಮದ ಬಟ್ಟಲು, ಬೆಳ್ಳಿಯ ನಾಣ್ಯಗಳನ್ನು ಒಯ್ದಿದ್ದಾರೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಡುಗೆ ಅನಿಲ ರೀಫಿಲ್ ಘಟಕದ ಮೇಲೆ ದಾಳಿ

ಹಾಸನ: ಅಕ್ರಮವಾಗಿ ಅಡುಗೆ ಅನಿಲವನ್ನು ರೀಫಿಲ್ ಮಾಡುತ್ತಿದ್ದ ಎರಡು ಕೇಂದ್ರಗಳ ಮೇಲೆ ಶುಕ್ರವಾರ ದಾಳಿ ನಡೆಸಿದ ಪೊಲೀಸರು 17 ಸಿಲಿಂಡರ್‌ಗಳನ್ನು ವಶಪಡಿಸಿಕೊಂಡು ಅಕ್ರಮ ದಂಧೆಯಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿದ್ದಾರೆ.ಬಸವರಾಜ ಶೆಟ್ಟಿ ಹಾಗೂ ಪ್ರಸಾದ್ ಎಂಬುವವರು ಬಂಧಿತ ವ್ಯಕ್ತಿಗಳು. ಅರಳೀಕಟ್ಟೆ ವೃತ್ತದಲ್ಲಿರುವ ಶ್ರೀನಿವಾಸ ಎಂಟರ್‌ಪ್ರೈಸಸ್ ಹಾಗೂ ರಾಜರಾಜೇಶ್ವರಿ ಎಂಟರ್ ಪ್ರೈಸಸ್ ಎಂಬ ಸಂಸ್ಥೆಗಳಲ್ಲಿ ಈ ಅಕ್ರಮ ನಡೆಯುತ್ತಿದೆ ಎಂಬ ಮಾಹಿತಿಯ ಆಧಾರದಲ್ಲಿ ಶುಕ್ರವಾರ ಮಧ್ಯಾಹ್ನ ನಗರ ಠಾಣೆ ಪಿಎಸ್‌ಐ ಕೃಷ್ಣ ಹಾಗೂ ಇತರ ಸಿಬ್ಬಂದಿ ದಾಳಿ ನಡೆಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry