ಬುಧವಾರ, ಏಪ್ರಿಲ್ 14, 2021
25 °C

ಎಂಜಿನಿಯರಿಂಗ್ ಕೌಶಲ್ಯ ಪ್ರತಿಭಾನ್ವೇಷಣೆಗೆ ಕ್ವೆಸ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾಗತಿಕ ಎಂಜಿನಿಯರಿಂಗ್ ಕಂಪೆನಿ ‘ಕ್ವೆಸ್ಟ್ ಗ್ಲೋಬಲ್ ಎಂಜಿನಿಯರಿಂಗ್’ ದೇಶಾದ್ಯಂತ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ‘ಇಂಜಿನಿಯಂ 2010’ ಎಂಬ ವಿನ್ಯಾಸ ಸ್ಪರ್ಧೆಯನ್ನು ಆಯೋಜಿಸಿದೆ. ಬಿಇ, ಬಿಟೆಕ್ ಅಂತಿಮ ವರ್ಷದ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಯೋಜನೆಗಳನ್ನು ಪ್ರದರ್ಶಿಸಲು ಇದು ಅವಕಾಶ ಮಾಡಿಕೊಡುತ್ತದೆ. ವಿದ್ಯಾರ್ಥಿ ಸಮುದಾಯದಲ್ಲಿ ನವೀನ ಸಂಶೋಧನೆಗಳಿಗೆ ಉತ್ತೇಜನ, ಎಂಜಿನಿಯರಿಂಗ್ ವಲಯದಲ್ಲಿ ಪ್ರತಿಭಾವಂತ ಮಾನವ ಸಂಪನ್ಮೂಲ ಅಭಿವೃದ್ಧಿ ಇದರ ಉದ್ದೇಶ ಎನ್ನುತ್ತಾರೆ ಕ್ವೆಸ್ಟ್ ಗ್ಲೋಬಲ್ ಮುಖ್ಯ ನಿರ್ವಹಣಾ ಅಧಿಕಾರಿ ಅಜಯ್ ಪ್ರಭು. ಏರೋಸ್ಪೇಸ್, ಇಂಡಸ್ಟ್ರಿಯಲ್, ಮೆಕ್ಯಾನಿಕಲ್, ಗಣಿತ, ವಿದ್ಯುತ್ ಉತ್ಪಾದನೆ, ಪ್ರೊಡಕ್ಷನ್ ಮತ್ತಿತರ ವಿಭಾಗಗಳ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಟೀಮಿಂಗ್, ಯೋಜನೆಯ ಆಯ್ಕೆ, ಯೋಜನೆಯ ಸಂಕೀರ್ಣತೆ ಮುಂತಾದ ಅಂಶವನ್ನು ಪರಿಗಣಿಸಲಾಗುತ್ತದೆ. ಮೊದಲ ಮೂರು ತಂಡಗಳಿಗೆ ಕ್ರಮವಾಗಿ 1 ಲಕ್ಷ, 50 ಸಾವಿರ ಮತ್ತು 25 ಸಾವಿರ ರೂ ನಗದು ಬಹುಮಾನ ದೊರೆಯಲಿದೆ.

ನೋಂದಣಿಗೆ //ಇಂದೇ ಕೊನೆ ದಿನ. ಮಾಹಿತಿಗೆ:http://ingenium.quest-global.com    

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.