ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅನಿವಾಸಿ ಭಾರತೀಯನಿಂದ ಶಿಷ್ಯವೇತನ

7

ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅನಿವಾಸಿ ಭಾರತೀಯನಿಂದ ಶಿಷ್ಯವೇತನ

Published:
Updated:

 


ಬೆಂಗಳೂರು: ಬೆಂಗಳೂರು ವಿವಿಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಧ್ಯಯನ ಮಾಡುವ ಬಡ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲು ಅನಿವಾಸಿ ಭಾರತೀಯ ಬಿ.ಟಿ. ಲಕ್ಷ್ಮಣ 50 ಸಾವಿರ ಡಾಲರ್ (ಅಂದಾಜು 25 ಲಕ್ಷ ರೂಪಾಯಿ) ಮೊತ್ತದ ದತ್ತಿನಿಧಿ ನೀಡಿದ್ದಾರೆ.

 

ಗುರುವಾರ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ವಿವಿ ಕುಲಪತಿ ಪ್ರೊ.ಎನ್. ರಂಗಸ್ವಾಮಿ ಮತ್ತು ಬಿ.ಟಿ. ಲಕ್ಷ್ಮಣ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು. ಬಳಿಕ ಲಕ್ಷ್ಮಣ 50 ಸಾವಿರ ಡಾಲರ್ ಮೊತ್ತದ ಚೆಕ್‌ಅನ್ನು ಹಸ್ತಾಂತರಿಸಿದರು. `ಪ್ರತಿ ವರ್ಷ ಹತ್ತು ವಿದ್ಯಾರ್ಥಿಗಳಿಗೆ ವಾರ್ಷಿಕ ತಲಾ ಹತ್ತು ಸಾವಿರ ರೂಪಾಯಿ ಶಿಷ್ಯವೇತನ ನೀಡಲಾಗುತ್ತದೆ. ಮೊದಲ ವರ್ಷ ಆಯ್ಕೆಯಾದವರು ಮುಂದಿನ ಮೂರೂ ವರ್ಷ ಈ ಸೌಲಭ್ಯ ಪಡೆಯಲಿದ್ದಾರೆ' ಎಂದು ಪ್ರೊ. ರಂಗಸ್ವಾಮಿ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry