ಸೋಮವಾರ, ಜೂನ್ 21, 2021
29 °C

ಎಂಜಿನಿಯರ್‌ಗಳಿಗೆ ಉದ್ಯೋಗಾವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದ ಎಂಜಿನಿಯ­ರಿಂಗ್ ಪದವೀಧರರಿಗೆ ಅಮೆರಿಕ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ಕೆನಡಾ. ಜಪಾನ್‌ ಸೇರಿದಂತೆ ಇತರ 16ದೇಶ­ಗಳಲ್ಲಿ ಕೆಲಸ ಮಾಡುವ ಹೆಚ್ಚಿನ ಅವಕಾಶಗಳು ಶೀಘ್ರ ದೊರೆಯಲಿದೆ.  ಈ ಕುರಿತು ಭಾರತ ಜೂನ್ ತಿಂಗಳಲ್ಲಿ ಅಂತರರಾಷ್ಟ್ರೀಯ ಮಟ್ಟ­ದಲ್ಲಿ ‘ವಾಷಿಂಗ್ಟನ್‌ ಅಕಾರ್ಡ್’ ಜತೆ ಒಪ್ಪಂದವೊಂದಕ್ಕೆ ಸಹಿ ಹಾಕಲಿದೆ.ಒಪ್ಪಂದದ ಅನ್ವಯ, ಭಾರತ ‘ವಾಷಿಂಗ್ಟನ್‌ ಅಕಾರ್ಡ್‌’ಗೆ ಜೂನ್‌­ನಲ್ಲಿ ಪೂರ್ಣಪ್ರಮಾಣದ ಸದಸ್ಯ ರಾಷ್ಟ್ರ­ವಾಗಲಿದೆ. ಇದರಿಂದ ಭಾರ­ತೀಯ  ಎಂಜಿನಿಯರಿಂಗ್ ಪದವೀ­ಧ­ರ­ರಿಗೆ ವಿದೇಶದಲ್ಲಿ ಉದ್ಯೋಗ ಮಾಡುವ ಅವಕಾಶ ದೊರೆಯಲಿದೆ ಎಂದು ಕೇಂದ್ರ ಉನ್ನತ ಶಿಕ್ಷಣ ಕಾರ್ಯದರ್ಶಿ ಅಶೋಕ್‌ ಠಾಕೂರ್ ತಿಳಿಸಿದ್ದಾರೆ.ತೈವಾನ್‌, ಹಾಂಗ್‌–ಕಾಂಗ್, ಐರ್ಲೆಂಡ್‌, ಕೊರಿಯಾ, ಮಲೇಷ್ಯಾ, ನ್ಯೂಜಿಲೆಂಡ್‌, ರಷ್ಯಾ, ಸಿಂಗಪುರ, ದಕ್ಷಿಣ ಆಫ್ರಿಕಾ. ಟರ್ಕಿ ದೇಶಗಳೂ ಕೂಡಾ  ಈ ಒಪ್ಪಂದಕ್ಕೆ ಸಹಿ ಹಾಕಲಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.