ಎಂಜಿನಿಯರ್‌ಗಳ ತರಬೇತಿಗೆ ವಿನ್ಯಾಸ ಅಧ್ಯಯನ ಕೇಂದ್ರ

7

ಎಂಜಿನಿಯರ್‌ಗಳ ತರಬೇತಿಗೆ ವಿನ್ಯಾಸ ಅಧ್ಯಯನ ಕೇಂದ್ರ

Published:
Updated:ಬೆಂಗಳೂರು: ಲೋಕೋಪಯೋಗಿ, ನೀರಾವರಿ ಮತ್ತು ಇಂಧನ ಇಲಾ ಖೆಯ ಎಂಜಿನಿಯರುಗಳಿಗೆ ವಿನ್ಯಾಸ ಕ್ಷೇತ್ರದಲ್ಲಿನ ಹೊಸ ಬೆಳವಣಿಗೆಗಳ ಕುರಿತು ತರಬೇತಿ ನೀಡಲು ‘ವಿನ್ಯಾಸ ಅಧ್ಯಯನ ಕೇಂದ್ರ’ ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.ಕಾಮಗಾರಿ ಗುಣನಿಯಂತ್ರಣ ಕಾರ್ಯಪಡೆಯು ಜಲಸಂಪನ್ಮೂಲ ಇಲಾಖೆಯ ಕಾರ್ಯಪಾಲಕ ಎಂಜಿ ನಿಯರುಗಳು ಮತ್ತು ಮುಖ್ಯ ಎಂಜಿ ನಿಯರುಗಳಿಗಾಗಿ ಗುರುವಾರ ವಿಕಾಸ ಸೌಧದಲ್ಲಿ ಆಯೋಜಿಸಿದ್ದ ಪ್ರತಿ ಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.‘ಉದ್ದೇಶಿತ ಅಧ್ಯಯನ ಕೇಂದ್ರವು ವಿನ್ಯಾಸದಲ್ಲಿ ಪರಿಣತಿ ಹೊಂದಿದ ಎಂಜಿನಿಯರುಗಳ ಕೊರತೆಯನ್ನು ನೀಗಿಸಲು ನೆರವಾಗಲಿದೆ. ಇದು ವಿವಿಧ ಬಗೆಯ ನಿರ್ಮಾಣ ಕಾರ್ಯ ವನ್ನು ನಿರ್ವಹಿಸುತ್ತಿರುವ ಸರ್ಕಾರದ ಇಲಾಖೆಗಳಿಗೆ ಪೂರಕವಾಗಲಿದೆ’ ಎಂದರು.ರಾಜ್ಯದಲ್ಲಿ ಎಂಜಿನಿಯರುಗಳ ಜ್ಞಾನ ವೃದ್ಧಿಗೆ ಪೂರಕವಾಗಿ ಎರಡು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕ ಎಂಜಿನಿಯರುಗಳ ಸಂಶೋಧನಾ ಸಂಸ್ಥೆ (ಕೆಇಆರ್‌ಎಸ್) ಸಿವಿಲ್ ಎಂಜಿನಿಯರುಗಳಿಗೆ ನಿರ್ಮಾಣ ಕಾರ್ಯದಲ್ಲಿನ ಸವಾಲು ಗಳನ್ನು ಎದುರಿಸಲು ನೆರವಾಗುತ್ತಿದೆ. ಧಾರವಾಡದಲ್ಲಿರುವ ಜಲ ಮತ್ತು ಭೂ ನಿರ್ವಹಣೆ ಸಂಸ್ಥೆ (ವಾಲ್ಮಿ) ನೀರು ಮತ್ತು ಭೂಮಿಯ ಬಳಕೆ ಕುರಿತ ಯೋಜನೆಗಳಲ್ಲಿ ಎಂಜಿನಿ ಯರುಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಸದ್ಯದ ಅಗತ್ಯಕ್ಕೆ ಅನು ಗುಣವಾಗಿ ಎರಡೂ ಸಂಸ್ಥೆಗಳನ್ನು ಪುನರ್‌ರಚನೆ ಮಾಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry