ಶುಕ್ರವಾರ, ಮೇ 14, 2021
31 °C

ಎಂಜಿನಿಯರ್ ಪದವೀಧರನ ಕೃಷಿ ಪ್ರೀತಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ತಾಲ್ಲೂಕಿನ ದರಸಗುಪ್ಪೆಯ ಸಿ. ಜಗದೀಶ್ ಎಂಬ ಎಂಜಿನಿಯರ್ ಪದವೀಧರ ಕೃಷಿ ಕ್ಷೇತ್ರದತ್ತ ಒಲವು ಬೆಳೆಸಿಕೊಂಡಿದ್ದು, ವೈಜ್ಞಾನಿಕ ಕೃಷಿ ಮೂಲಕ ಗಮನ ಸೆಳೆದಿದ್ದಾರೆ.ತಮ್ಮ 8 ಎಕರೆ ಜಮೀನಿನಲ್ಲಿ ಕಬ್ಬು, ಬತ್ತ, ರಾಗಿಯನ್ನು ಮುಖ್ಯ ಬೆಳೆಯಾಗಿ ಬೆಳೆಯುತ್ತಿದ್ದು, ಅಂತರ ಬೆಳೆಯಾಗಿ ಟೊಮೆಟೊ, ಬೀನ್ಸ್ ಇತರ ತರಕಾರಿ ಬೆಳೆಯನ್ನು ಅಂತರ ಬೆಳೆಯಾಗಿ ಬೆಳೆಯುತ್ತಿದ್ದಾರೆ.ಈ ಬಾರಿ ಅಂತರ ಬೆಳೆಯಾಗಿ ಬೆಳೆದ ಟೊಮೆಟೊ ಬೆಳೆಯಿಂದ ಗಣನೀಯ ಲಾಭ ಗಳಿಸಿದ್ದಾರೆ. ಕಬ್ಬು ಬೆಳೆಗೆ ಮಾಡಿದ ಖರ್ಚು ಟೊಮೆಟೊ ಬೆಳೆಯಿಂದ ಬಂದಿದೆ. ಸುಮಾರು ಎರಡು ಎಕರೆ ವಿಸ್ತೀರ್ಣದಲ್ಲಿ ಶುಂಠಿ ಬೆಳೆದಿದ್ದು, ಅದೂ ಕೂಡ ಉತ್ತಮ ಫಸಲು ಕೊಟ್ಟಿದೆ.ತರಗು ನಿರ್ವಹಣೆ: ಕಬ್ಬು ಬೇಸಾಯ ದಲ್ಲಿ ಒಣಗಿದ ತರಗನ್ನು ಸುಡದೆ ಮಣ್ಣಿನಿಂದ ಮುಚ್ಚಿ ಗೊಬ್ಬರವಾಗಿ ಪತಿವರ್ತಿಸಿದ್ದಾರೆ. ಇದರಿಂದ ಕಬ್ಬು ಹುಲುಸಾಗಿ ಬೆಳೆದಿದೆ. ತರಗು ನಿರ್ವ ಹಣೆ ಮಾಡಿದರೆ ಹೆಚ್ಚು ಕೊಟ್ಟಿಗೆ ಗೊಬ್ಬರದ ಅಗತ್ಯ ಇರುವುದಿಲ್ಲ ಎಂದು ಜಗದೀಶ್ ಹೇಳುತ್ತಾರೆ. ಸಿವಿಲ್ ಎಂಜಿನಿಯರ್ ಪದವೀಧರಾಗಿರುವ ಜಗದೀಶ್ ಆಲೆಮನೆ ಕೂಡ ನಡೆಸುತ್ತಿದ್ದಾರೆ. ತಮ್ಮ ಜಮೀನಿನಲ್ಲಿ ಬೆಳೆದ ಕಬ್ಬನ್ನು ಗಾಣದಲ್ಲಿ ಅರೆದು ಬೆಲ್ಲವನ್ನಾಗಿ ಪರಿವರ್ತಿಸಿ ಮಾರಾಟ ಮಾಡುತ್ತಿದ್ದಾರೆ.  ತಮ್ಮ ತಂದೆ ಚಿಕ್ಕಜವರೇಗೌಡ ಅವರು ಮಾಡುತ್ತಿದ್ದ ಕೃಷಿಯ ಬಗ್ಗೆ ಆರಂಭದಲ್ಲಿ ತಿರಸ್ಕಾರ ಭಾವನೆ ಹೊಂದಿದ್ದ ಜಗದೀಶ್ ತಮ್ಮ ರೈತ ಮಿತ್ರರ ಸಲಹೆಯಂತೆ ಕೃಷಿಯತ್ತ ಮುಖ ಮಾಡಿದ್ದಾರೆ. ಎಂಜಿನಿಯರ್ ಪದವಿ ಪಡೆದರೂ ಉದ್ಯೋಗಕ್ಕೆ ಸೇರದೆ ಬೇಸಾಯದಲ್ಲಿ ತಮ್ಮನ್ನು ತೊಡಗಿಸಿ ಕೊಂಡರು. ಕಷ್ಟಪಟ್ಟು ಕೆಲಸ ಮಾಡಿ ಕೃಷಿ ಕ್ಷೇತ್ರದಲ್ಲೂ ಯಶಸ್ವಿ ರೈತ ಎನಿಸಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.