ಗುರುವಾರ , ಏಪ್ರಿಲ್ 15, 2021
31 °C

ಎಂಜಿನಿಯರ್ ಲೋಕಾಯುಕ್ತ ಬಲೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸವಣೂರ: ಪುರಸಭೆಯ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರ ಬಳಿ ಲಂಚ ಸ್ವೀಕರಿಸುತ್ತಿದ್ದ ಇಲ್ಲಿನ ಪುರಸಭೆಯ ಕಿರಿಯ ಎಂಜಿನಿಯರ್ ಮಾನಸಿಂಗ್ ರಾಠೋಡ್ ಬುಧವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.ಸವಣೂರಿನ ಅಂಬೇಡ್ಕರ್ ನಗರದಲ್ಲಿ ದೇವಸ್ಥಾನದ ಕಟ್ಟೆ ನಿರ್ಮಾಣವನ್ನು ರೂ. 27, 000 ಮೊತ್ತದಲ್ಲಿ ನಿರ್ಮಿಸಲಾಗಿದೆ.

 

ಅದರ ಬಿಲ್ ಪಾವತಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ನೀಡಲು ಕಿರಿಯ ಎಂಜಿನಿಯರ್ ಮಾನಸಿಂಗ್ ರಾಠೋಡ್ 2000 ರೂಪಾಯಿ ಲಂಚ ಕೇಳಿದ್ದರು.ಫಿರ್ಯಾದಿ ಅರಬ್‌ಬೇಗ್ ಹಯಾತ್‌ಬೇಗ್ ಮಿರ್ಜಾ ಲಂಚದ ಹಣವನ್ನು  ನೀಡುತ್ತಿದ್ದ ಸಂದರ್ಭದಲ್ಲಿ ದಾಳಿ ಮಾಡಲಾಗಿದ್ದು, ಆರೋಪಿಯನ್ನು ಲಂಚದ ಹಣದೊಂದಿಗೆ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.ದಾವಣಗೆರೆ ಲೋಕಾಯುಕ್ತ ವರಿಷ್ಠಾಧಿಕಾರಿ ಎಸ್.ಎಫ್ ಕಂಬಾರ, ಡಿಎಸ್‌ಪಿ ಎಮ್.ಬಿ ಪಾಟೀಲ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಹಾವೇರಿಯ ಪಿಐ ಎಮ್.ಕೆ ಗಂಗಲ್, ಬಿ.ಸಿ ಉಮಾಪತಿ, ಸಿಬ್ಬಂದಿ ಎ.ಕೆ ಕುಲಕರ್ಣಿ, ಎಸ್.ಡಿ ಪಾಲೇಗೊಂದಿ, ಎಮ್.ಡಿ ಹಿರೇಮಠ, ಕೆ.ಎಮ್ ಹಿರೇಮಠ, ಎಸ್.ಎಮ್ ಹಿರೇಮಠ, ಮದರಕಂಡಿ ಮುಂತಾದವರು ದಾಳಿಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.