ಎಂಜಿನಿಯರ್ ಸಾವು

7

ಎಂಜಿನಿಯರ್ ಸಾವು

Published:
Updated:

ಪಾವಗಡ:  ಲಂಡನ್‌ಗೆ ಕೆಲಸದ ಮೇಲೆ ತೆರಳಿದ್ದ ಸಾಫ್ಟ್‌ವೇರ್ ಎಂಜಿನಿಯರ್‌ರೊಬ್ಬರು ಕಾರು ಅಪಘಾತದಲ್ಲಿ ಸಾವಿಗೀಡಾಗಿದ್ದು, ನಾಲ್ವರು ಗಾಯಗೊಂಡ ಘಟನೆ ಶನಿವಾರ ಮುಂಜಾನೆ ಲಂಡನ್‌ನಲ್ಲಿ ಸಂಭವಿಸಿದೆ. ಮೃತರನ್ನು ಪಾವಗಡದ ರಾಘವೇಂದ್ರ (28) ಎಂದು ಗುರುತಿಸಲಾಗಿದೆ. ಗಾಯಗೊಂಡ ನಾಲ್ವರು ಕೂಡ ಕರ್ನಾಟಕದವರು ಎಂದು ಹೇಳಲಾಗಿದೆ. ಆದರೆ ಅವರ ವಿವರ ತಿಳಿದುಬಂದಿಲ್ಲ.ಕಂಪೆನಿಯೊಂದರ ಪರವಾಗಿ ಈ ಐವರು ಕಳೆದ ವಾರ ಲಂಡನ್‌ಗೆ ತೆರಳಿದ್ದರು. ಕಂಪೆನಿ ವಹಿಸಿದ್ದ ಕೆಲಸ ಮುಗಿಸಿ ತಾಯ್ನಾಡಿಗೆ ಮರಳಲು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಾಗ ಕಾರಿನ ಟೈರ್ ಸಿಡಿದು ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry