ಎಂಟರ ಘಟ್ಟಕ್ಕೆ ಕರ್ನಾಟಕ

7
ರಾಷ್ಟ್ರೀಯ ಸಬ್ ಜೂನಿಯರ್ ಥ್ರೋಬಾಲ್

ಎಂಟರ ಘಟ್ಟಕ್ಕೆ ಕರ್ನಾಟಕ

Published:
Updated:

ನಂಜನಗೂಡು: ಆತಿಥೇಯ ಕರ್ನಾಟಕದ ಬಾಲಕ ಹಾಗೂ ಬಾಲಕಿಯರ ತಂಡಗಳು ಭಾರತ ಥ್ರೋಬಾಲ್ ಫೆಡರೇಷನ್ ವತಿಯಿಂದ ಇಲ್ಲಿನ ಸಿಟಿಜನ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ 21ನೇ ರಾಷ್ಟ್ರೀಯ ಸಬ್ ಜೂನಿಯರ್ ಥ್ರೋಬಾಲ್ ಚಾಂಪಿಯನ್‌ಷಿಪ್‌ನ ಎರಡನೇ ದಿನವಾದ ಶನಿವಾರ ನಡೆದ ಲೀಗ್ ಹಂತದ ಪಂದ್ಯಗಳಲ್ಲಿ ಗೆದ್ದು ಕ್ವಾರ್ಟರ್ ಫೈನಲ್ ತಲುಪಿದವು.ಕರ್ನಾಟಕ ಬಾಲಕರ ತಂಡ ಲೀಗ್ ಹಂತದಲ್ಲಿ ಬಿಹಾರ, ಆಂಧ್ರ ಪ್ರದೇಶ, ವಿದರ್ಭ ತಂಡಗಳನ್ನು 2-0 ನೇರ ಸೆಟ್‌ನಿಂದ ಮಣಿಸಿ `ಬಿ' ಗುಂಪಿನಲ್ಲಿ ಮೊದಲ ಸ್ಥಾನ ಪಡೆಯಿತು. ಕರ್ನಾಟಕ ಬಾಲಕಿಯರ ತಂಡವು ದೆಹಲಿ ವಿರುದ್ಧ 2-0 ನೇರ ಸೆಟ್‌ನಿಂದ ಗೆಲುವು ಸಾಧಿಸಿತು. ಆದರೆ, ಹರ್ಯಾಣ ವಿರುದ್ಧ ಸೋತು `ಬಿ' ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ಎಂಟರ ಘಟ್ಟ ತಲುಪಿತು.ಕ್ವಾರ್ಟರ್ ಫೈನಲ್ ತಲುಪಿದ ತಂಡಗಳು:

ಬಾಲಕರು: ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಹರಿಯಾಣ, ಗೋವಾ, ಉತ್ತರಾಂಚಲ, ರಾಜಸ್ಥಾನ (ಮತ್ತೊಂದು ನಿರ್ಧಾರ ಆಗಬೇಕು). 

ಬಾಲಕಿಯರು: ಹರಿಯಾಣ, ಕರ್ನಾಟಕ, ಆಂಧ್ರ ಪ್ರದೇಶ, ದೆಹಲಿ, ಗೋವಾ ತಮಿಳುನಾಡು, ರಾಜಸ್ಥಾನ, ಮುಂಬೈ.

ಭಾನುವಾರ  ಅಂತಿಮ ಪಂದ್ಯ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry