ಎಂಟರ ಘಟ್ಟಕ್ಕೆ ಮಂಗಳೂರು ವಿವಿ

7
ದಕ್ಷಿಣ ವಲಯ ಅಂತರ ವಿವಿ ಕ್ರಿಕೆಟ್

ಎಂಟರ ಘಟ್ಟಕ್ಕೆ ಮಂಗಳೂರು ವಿವಿ

Published:
Updated:

ಮಣಿಪಾಲ: ಉತ್ತಮ ಬೌಲಿಂಗ್ ಸಂಘಟಿಸಿದ ಮಂಗಳೂರು ವಿಶ್ವವಿದ್ಯಾಲಯ, 90 ರನ್‌ಗಳ ಗಮನಾರ್ಹ ಅಂತರದಿಂದ ಹೈದರಾಬಾದಿನ ಒಸ್ಮಾನಿಯಾ ವಿಶ್ವವಿದ್ಯಾಲಯ ತಂಡವನ್ನು ಸೋಲಿಸಿ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.

ಮಣಿಪಾಲ ವಿ.ವಿ. ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮಂಗಳೂರು 207 ರನ್‌ಗಳ ಸಾಧಾರಣ ಮೊತ್ತ ಗಳಿಸಿದರೂ, ಈ ಮೊತ್ತ ರಕ್ಷಿಸಲು ಬೌಲರುಗಳು ನೆರವಿಗೆ ಬಂದರು. ಎಡಗೈ ಸ್ಪಿನ್ನರ್ ಪವನ್ ಗೋಖಲೆ ಮತ್ತು ಆಫ್ ಸ್ಪಿನ್ನರ್ ರೀತೇಶ್ ತಲಾ ಮೂರು ವಿಕೆಟ್‌ಗಳನ್ನು ಪಡೆದರು. ಇದಕ್ಕೆ ಮೊದಲು ಮಂಗಳೂರು ಪರ ನವೀನ್ ಸಂಯಮದ ಆಟವಾಡಿ 87 ಎಸೆತಗಳಲ್ಲಿ 77 ರನ್ (6 ಸಿಕ್ಸರ್, 2 ಬೌಂಡರಿ) ಗಳಿಸಿದ್ದರು.ಆದರೆ ಆತಿಥೇಯ ಮಣಿಪಾಲ ವಿಶ್ವವಿದ್ಯಾಲಯ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾಲಯ ತಂಡಕ್ಕೆ ಶರಣಾಯಿತು.ಬೆಂಗಳೂರು ವಿ.ವಿ. ಇನ್ನೊಂದು ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಕಣ್ಣೂರು ವಿಶ್ವವಿದ್ಯಾಲಯವನ್ನು ಸೋಲಿಸಿ ಪ್ರಿಕ್ವಾರ್ಟರ್‌ಫೈನಲ್ ತಲುಪಿತು.ಸ್ಕೋರುಗಳು: ಎಂಐಟಿ ಮೈದಾನ: ಮಣಿಪಾಲ ವಿಶ್ವವಿದ್ಯಾಲಯ: 45 ಓವರುಗಳಲ್ಲಿ 147 (ಸುಮಿತ್ ಅಗರವಾಲ್ 70; ಎ.ರಾಜಾ 36ಕ್ಕೆ3, ಪಂಪಾಪತಿ 26ಕ್ಕೆ2, ಎಂ.ರಹಮತ್‌ಉಲ್ಲಾ 22ಕ್ಕೆ2); ಶ್ರೀವೆಂಕಟೇಶ್ವರ ವಿಶ್ವವಿದ್ಯಾಲಯ, ತಿರುಪತಿ: 23.5 ಓವರುಗಳಲ್ಲಿ 4 ವಿಕೆಟ್‌ಗೆ 149

(ವೈ.ಪ್ರೇಮಸಾಗರ್ 42, ವಿ.ಅನಿಲ್ ಕುಮಾರ್ 38, ಪಿ.ಸುದರ್ಶನ ಪ್ರಕಾಶ್ ಔಟಾಗದೇ 23, ದುರ್ಗಾಪ್ರಸಾದ್ ಔಟಾಗದೇ 20; ಪ್ರಶಾಂತ್ 49ಕ್ಕೆ3).

ಮಣಿಪಾಲ ವಿ.ವಿ. ಮೈದಾನ1: ಕಲ್ಲಿಕೋಟೆ ವಿಶ್ವವಿದ್ಯಾಲಯ: 45 ಓವರುಗಳಲ್ಲಿ 6 ವಿಕೆಟ್‌ಗೆ 150 (ಪಿ.ಜೆ.ಶ್ರೀಜಿತ್ ಔಟಾಗದೇ 42; ಕರಣ್ ಕಷ್ಯಪ್ 16ಕ್ಕೆ2); ಮದರಾಸು ವಿ.ವಿ, ಚೆನ್ನೈ: 42 ಓವರುಗಳಲ್ಲಿ 6 ವಿಕೆಟ್‌ಗೆ 152 (ಎಂ.ಕಮಲೇಶ್ 55, ಶಿವರಾಮಕೃಷ್ಣನ್ 29; ಮೊಹಮದ್ ಆಶಿಖ್ 25ಕ್ಕೆ3).

ಮಣಿಪಾಲ ವಿ.ವಿ. ಮೈದಾನ2: ಮಂಗಳೂರು ವಿಶ್ವವಿದ್ಯಾಲಯ: 48.5 ಓವರುಗಳಲ್ಲಿ 207 (ನವೀನ್ ಎಂ.ಜಿ. 77, ಶಾಹಿರ್ ಎಂ. 32; ಸೂರ್ಯತೇಜ 24ಕ್ಕೆ3, ವಿಶ್ವಜಿತ್ ಪಟ್ನಾಯಕ್ 34ಕ್ಕೆ2, ಸಾಯಿ ವೆಂಕಟೇಶ್ 37ಕ್ಕೆ2); ಒಸ್ಮಾನಿಯಾ ವಿ.ವಿ, ಹೈದರಾಬಾದ್: 38.3 ಓವರುಗಳಲ್ಲಿ 117 (ಮನೋಜ್ ಕುಮಾರ್ 61; ಪವನ್ ಗೋಖಲೆ 25ಕ್ಕೆ3, ರೀತೇಶ್ 22ಕ್ಕೆ3, ನಿಶಿತ್ ರಾಜ್ 18ಕ್ಕೆ2).ಎಂ.ಜಿ.ಎಂ. ಕಾಲೇಜು ಮೈದಾನ: ಕಣ್ಣೂರು ವಿ.ವಿ: 35.2 ಓವರುಗಳಲ್ಲಿ 123 (ಸ್ಟಾಲಿನ್ ಹೂವರ್ 17ಕ್ಕೆ2, ಯೂಸುಫ್ ಅಝೀಜ್ 23ಕ್ಕೆ2, ಚೇತನ್ ಕೆ.ವಿ. 16ಕ್ಕೆ2); ಬೆಂಗಳೂರು ವಿ.ವಿ: 17.4 ಓವರುಗಳಲ್ಲಿ 4 ವಿಕೆಟ್‌ಗೆ 127 (ಅರ್ಜುನ್ ಹೊಯ್ಸಳ 36, ಹೇಮಂತ ಕುಮಾರ್ 28, ರಾಜಕುಮಾರ್ ಔಟಾಗದೇ 25; ರಯೀಸ್ ಕೆ.ಕೆ. 38ಕ್ಕೆ2).ಎನ್‌ಐಟಿಕೆ ಮೈದಾನ: ಅಣ್ಣಾಮಲೈ ವಿ.ವಿ, ಚಿದಂಬರಂ: 50 ಓವರುಗಳಲ್ಲಿ 7 ವಿಕೆಟ್‌ಗೆ 255 (ಮಣಿಭಾರತಿ ಕೆ. 107); ಭಾರತ್ ವಿ.ವಿ. ಚೆನ್ನೈ: 46.3 ಓವರುಗಳಲ್ಲಿ 201 (ಸುರೇಂದರ್ 103, ಸುಜಿತ್ 32; ಪ್ರಭಾಕರನ್ 16ಕ್ಕೆ5).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry