ಶನಿವಾರ, ಜೂನ್ 12, 2021
28 °C

ಎಂಟು ಎಂಜಿನಿಯರಿಂಗ್ ಅಂಗವಿಕಲರಿಗೆ ಉದ್ಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಂಗವಿಕಲ ಎಂಜಿನಿಯರಿಂಗ್ ಪದವೀಧರರಿಗಾಗಿ ಚೆಶೈರ್ ಡಿಸೆಬೆಲಿಟಿ ಟ್ರಸ್ಟ್ ಮತ್ತು ನಾಸ್ಕಾಂ ನಗರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಉದ್ಯೋಗ ಮೇಳದಲ್ಲಿ ಎಂಟು ಮಂದಿ ಕೆಲಸ ಗಿಟ್ಟಿಸಿದ್ದಾರೆ. ಇನ್ನೂ ಮೂವತ್ತೈದು ಮಂದಿಯ ಪಟ್ಟಿ ತಯಾರಾಗಿದ್ದು ಪರಿಶೀಲನೆಯ ಹಂತದಲ್ಲಿದೆ ಎಂದು ಚೆಶೈರ್ ಸಿಸೆಬೆಲಿಟಿ ಟ್ರಸ್ಟ್‌ನ ವ್ಯವಸ್ಥಾಪಕಿ ಅನುರಾಧಾ ಪಾಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಐಬಿಎಂ, ಎಂಫಸಿಸ್, ಥಾಮಸ್, ರಿಯುಟರ್ಸ್‌, ಐಟಿಟಿಐ, ಕಾನ್ಸೆನ್‌ಟ್ರಿಕ್ಸ್ ಮತ್ತು ಏಜೀಸ್ ಕಂಪೆನಿಗಳು ಭಾಗವಹಿಸಿದ್ದವು. ಒಟ್ಟು 65 ಮಂದಿ ಅಂಗವಿಕಲ ವಿದ್ಯಾರ್ಥಿಗಳು ಮೇಳದಲ್ಲಿ ಪಾಲ್ಗೊಂಡಿದ್ದರು. ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದವರಿಗೆ ಟ್ರಸ್ಟ್ ಸಾಮರ್ಥ್ಯ ಮತ್ತು ಕೌಶಲ್ಯ ತರಬೇತಿ ನೀಡಿತ್ತು ಎಂದು ಅವರು ಹೇಳಿದ್ದಾರೆ.ಅಂಗವಿಕಲರಿಗೂ ಸಮಾನ ಅವಕಾಶ ನೀಡುವ ಉದ್ದೇಶದಿಂದ ಈ ಮೇಳ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಶಿಕ್ಷಣಕ್ಕೆ ತಕ್ಕಂತಹ ಕೆಲಸ ಪಡೆಯಬೇಕು ಎಂಬುದು ಆಶಯವಾಗಿದೆ ಎಂದು ತಿಳಿಸಿದ್ದಾರೆ.ಐಬಿಎಂ ಕಂಪೆನಿಯಲ್ಲಿ ಇಬ್ಬರು, ಅಸೆಂಚರ್ ಕಂಪೆನಿಯಲ್ಲಿ ಮೂರು ಮಂದಿ ಮತ್ತು ಏಜೀಸ್ ಕಂಪೆನಿಯಲ್ಲಿ ಮೂವರು ಕೆಲಸ ಪಡೆದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.