ಎಂಟು ಬೇಡಿಕೆಗೆ ಅಸ್ತು

7

ಎಂಟು ಬೇಡಿಕೆಗೆ ಅಸ್ತು

Published:
Updated:

ಭುವನೇಶ್ವರ (ಪಿಟಿಐ): ಮಾವೊವಾದಿಗಳ ಒತ್ತಡಕ್ಕೆ ಮಣಿದಿರುವ ಒಡಿಶಾ ಸರ್ಕಾರ ನಕ್ಸಲರ 14 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಈಡೇರಿಸಲು ಸೋಮವಾರ ಸಮ್ಮತಿಸಿದೆ.ಉಳಿದ ಆರು ಬೇಡಿಕೆಗಳನ್ನು ಮಂಗಳವಾರ ಬೆಳಿಗ್ಗೆ ನಡೆಯಲಿರುವ ಅಂತಿಮ ಸುತ್ತಿನ ಮಾತುಕೆಯಲ್ಲಿ ಪರಿಶೀಲಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.ಮಾವೊವಾದಿಗಳು ಅಪಹರಿಸಿರುವ ಮಾಲ್ಕನ್‌ಗಿರಿ ಜಿಲ್ಲಾಧಿಕಾರಿ ಆರ್.ವಿ.ಕೃಷ್ಣ ಹಾಗೂ ಕಿರಿಯ ಎಂಜಿನಿಯರ್ ಪವಿತ್ರಾ ಮಝಿ ಅವರನ್ನು ಶೀಘ್ರವೇ ಬಿಡುಗಡೆ ಮಾಡುವ ಭರವಸೆ ತಮಗಿದೆ ಎಂದು ಮಾವೊವಾದಿಗಳ ಮಧ್ಯಸ್ಥಗಾರರ ಜೊತೆ ಮಾತುಕತೆ ನಡೆಸಿರುವ ಗೃಹ ಇಲಾಖೆಯ ಕಾರ್ಯದರ್ಶಿ ಯು.ಎನ್.ಬೆಹೆರಾ ಸುದ್ದಿಗಾರರಿಗೆ ತಿಳಿಸಿದ್ದಾರೆ.ಮಾವೊವಾದಿಗಳ ಪರ ಮಧ್ಯವರ್ತಿಗಳಾಗಿ ಪ್ರೊ.ಜಿ.ಹರಗೋಪಾಲ್, ಪ್ರೊ.ಸೋಮೇಶ್ವರ ರಾವ್ ಹಾಗೂ ದಂಡಪಾಣಿ ಮೊಹಂತಿ ಸರ್ಕಾರದ ಜೊತೆ ಮಾತುಕತೆಯಲ್ಲಿ ಪಾಲ್ಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry