ಶುಕ್ರವಾರ, ನವೆಂಬರ್ 22, 2019
27 °C

ಎಂಟು ಭಾರತೀಯರಿಗೆ ಗೌರವ

Published:
Updated:

ಜೋಹಾನ್ಸ್‌ಬರ್ಗ್ (ಪಿಟಿಐ): ದೇಶದ ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಭಾರತದ ಹಿರಿಯ ರಾಜತಾಂತ್ರಿಕ ಎನುಗಾ ರೆಡ್ಡಿ ಮತ್ತು ಏಳು ಭಾರತೀಯ ಮೂಲದ ದಕ್ಷಿಣ ಆಫ್ರಿಕಾ ಪ್ರಜೆಗಳನ್ನು ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.ಇದೇ 27ರಂದು ನಡೆಯಲಿರುವ ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯದಿನೋತ್ಸವ ಸಮಾರಂಭದಲ್ಲಿ ಅಧ್ಯಕ್ಷ ಜಾಕೋಬ್ ಜುಮಾ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ದಕ್ಷಿಣ ಆಫ್ರಿಕಾದ ಅತ್ಯಂತ ಪ್ರತಿಷ್ಠಿತವಾದ ಈ `ನ್ಯಾಷನಲ್ ಆರ್ಡರ್ಸ್‌' ಪ್ರಶಸ್ತಿಯನ್ನು ಲಿಂಗ ತಾರತಮ್ಯ, ವರ್ಣ ತಾರತಮ್ಯದ ವಿರುದ್ಧ ಮತ್ತು ಪ್ರಜಾಪ್ರಭುತ್ವ ಹಾಗೂ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಗಳಿಗೆ ವೈಯಕ್ತಿಕವಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ನೀಡಲಾಗುತ್ತದೆ.ರೆಡ್ಡಿ ಅವರು ಒಆರ್ ತಾಂಬೊ ಪ್ರಶಸ್ತಿ ಪಡೆದಿರುವ ನಾಲ್ವರು ವಿದೇಶಿಯರಲ್ಲಿ ಒಬ್ಬರಾಗಿದ್ದಾರೆ. ಖ್ವಾರ್ರೈಶಾ ಅಬ್ದೂಲ್ ಕರೀಂ, ಸುರಯಾ ಬೀಬಿ ಖಾನ್, ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತ ಯೂಸುಫ್ ಅಬ್ರಮ್‌ಜೀ, ಸೈಯದ್ ಮೊಹಮದ್ ರಿದ್ವಾನ್ ಮಿಯಾ, ಅಮಿನಾ ದೇಸಾಯಿ (ಮರಣೋತ್ತರ), ಮೂಸಾ ಮೂಲ್ಲಾ, ಎಸ್ಸಾಪ್ ಜಸ್ಸತ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರತಿಕ್ರಿಯಿಸಿ (+)