ಭಾನುವಾರ, ಮೇ 9, 2021
19 °C

ಎಂಟು ಸಂಸದರ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ತೆಲಂಗಾಣ ರಾಜ್ಯ ರಚನೆಗೆ ಆಗ್ರಹಿಸಿ ಕಲಾಪಕ್ಕೆ ಪದೇ ಪದೇ ಅಡಚಣೆ ಉಂಟುಮಾಡುತ್ತಿದ್ದ ಕಾಂಗ್ರೆಸ್‌ನ ಎಂಟು ಲೋಕಸಭಾ ಸದಸ್ಯರನ್ನು ನಾಲ್ಕು ದಿನಗಳವರೆಗೆ ಅಧಿವೇಶನದಲ್ಲಿ ಭಾಗವಹಿಸದಂತೆ ಮಂಗಳವಾರ ಅಮಾನತು ಮಾಡಲಾಗಿದೆ.

ತೆಲಂಗಾಣ ಭಾಗದ ಕಾಂಗ್ರೆಸ್ ಸಂಸದರಾದ ಪೊನ್ನಂ ಪ್ರಭಾಕರ್, ಮಧು ಯಾಸ್ಕಿ ಗೌಡ್, ಎಂ. ಜಗನ್ನಾಥ್, ಕೆ.ಆರ್.ಜಿ. ರೆಡ್ಡಿ, ಜಿ. ವಿವೇಕಾನಂದ, ಬಲರಾಂ ನಾಯ್ಕ, ಸುಕೇಂದರ್ ರೆಡ್ಡಿ ಗುಥಾ ಮತ್ತು ಎಸ್. ರಾಜಯ್ಯ ಅವರು ಅಮಾನತುಗೊಂಡವರು. ಸದನದಲ್ಲಿ ಗದ್ದಲ ಉಂಟುಮಾಡಿ ನಾಲ್ಕು ಸಾರಿ ಕಲಾಪ ಮುಂದೂಡಲು ಕಾರಣರಾದ ಈ ಸಂಸದರನ್ನು ಅಮಾನತು ಮಾಡುವಂತೆ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪವನ್ ಕುಮಾರ್ ಬನ್ಸಲ್ ನಿಲುವಳಿ ಮಂಡಿಸಿದರು. ಇದನ್ನು ಲೋಕಸಭೆ ಧ್ವನಿಮತದಿಂದ ಅಂಗೀಕರಿಸಿತು.

ಆಡಳಿತ ಪಕ್ಷದ ಸಂಸದರ ಗುಂಪೊಂದನ್ನು ಇದೇ ಮೊದಲ ಬಾರಿಗೆ ಸಂಸತ್ ಅಧಿವೇಶನದಲ್ಲಿ ಭಾಗವಹಿಸದಂತೆ ಅಮಾನತು ಮಾಡಿದ ಪ್ರಕರಣ ಇದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.