ಎಂಡಿಎನ್ ವಿರುದ್ಧ ಮಾತನಾಡಿಲ್ಲ

7

ಎಂಡಿಎನ್ ವಿರುದ್ಧ ಮಾತನಾಡಿಲ್ಲ

Published:
Updated:

ರಾಮನಗರ: `ಪ್ರೊ. ನಂಜುಂಡಸ್ವಾಮಿ ಅವರನ್ನು ಮಹಾತ್ಮ ಗಾಂಧೀಜಿಯಂತೆಯೇ ಗೌರವಿಸುವ ನಾನು ಅವರ ವಿರುದ್ಧ ಎಂದೂ ಅವಹೇಳನಕಾರಿಯಾಗಿ ಮಾತನಾಡಿಲ್ಲ.  ಕೆಲವರು ನನ್ನ ಬಗ್ಗೆ, ಪ್ರೊಫೆಸರ್ ಅವರ ಪುತ್ರ ಪಚ್ಚೆ ನಂಜುಂಡಸ್ವಾಮಿ ಅವರ ಬಳಿ ಸುಳ್ಳು ಹೇಳಿ, ಅವರಿಂದ, ಹೇಳಿಕೆಯನ್ನು ಕೊಡಿಸಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಂಚಾಲಕ ಜಿ.ಎಲ್.ಲಕ್ಷ್ಮಿನಾರಾಯಣಗೌಡ ಅಸಮಾಧಾನ ವ್ಯಕ್ತಪಡಿಸಿದರು.`ಇತ್ತೀಚೆಗೆ ಜಾನಪದ ಲೋಕದಲ್ಲಿ ನಡೆದ ರಾಜ್ಯಮಟ್ಟದ ರೈತರ ಕಾರ್ಯಾಗಾರದಲ್ಲಿ ನಾನು ಯಾವ ರೈತ ನಾಯಕರ ವಿರುದ್ಧವೂ ವೈಯಕ್ತಿಕವಾಗಿ ಮಾತನಾಡಿರಲಿಲ್ಲ. ರೈತ ಸಂಘಟನೆಯನ್ನು ಕೆಲವರು ದಾರಿ ತಪ್ಪಿಸುತ್ತಿದ್ದಾರೆ. ಅಂತಹ ನಕಲಿ ನಾಯಕರಿಗೆ ಬುದ್ಧಿ ಕಲಿಸಬೇಕು ಎಂದಷ್ಟೇ ಹೇಳಿದ್ದೆ~ ಎಂದು ಅವರು ಶನಿವಾರ ರಾಮನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.`ರೈತಪರ ಕಾಳಜಿ ಇದ್ದ ನಂಜುಂಡಸ್ವಾಮಿ ಅವರ ಭಾವಚಿತ್ರ ಹಾಕಿಕೊಂಡು ಕಾರ್ಯಕ್ರಮ ನಡೆಸುವುದು ಹೇಗೆ ತಪ್ಪಾಗುತ್ತದೆ. ಹಾಗೊಂದು ವೇಳೆ ಅದು ತಪ್ಪು ಎಂಬುದಾದರೆ ನ್ಯಾಯಾಲಯಕ್ಕೆ ಹೋಗಿ ಪ್ರಶ್ನಿಸಿದರೆ ಅವರಿಗೆ ಸರಿಯಾದ ಉತ್ತರ ಸಿಗಬಹುದು~ ಎಂದು ಅವರು ತಿರುಗೇಟು ನೀಡಿದರು.`ನಂಜುಂಡಸ್ವಾಮಿ ಅವರ ಜತೆಯಲ್ಲಿ ರೈತ ಸಂಘಟನೆಗೆ ಶ್ರಮಿಸಿದವನು ನಾನು. 33 ವರ್ಷದಿಂದ ಈ ಕೆಲಸದಲ್ಲಿ ನಿರತನಾಗಿದ್ದೇನೆ. ಕೆಲ ವರ್ಷ ಕ್ರಿಯಾಶೀಲನಾಗಿರಲಿಲ್ಲ ಅಷ್ಟೆ. ನಾನು ಬಂದರೆ ತಮಗೆ ಉಳಿಗಾಲ್ಲ ಇಲ್ಲ ಎನ್ನುವುದನ್ನು ಅರಿತ  ಈ ಭಾಗದ ರೈತ ನಾಯಕರು ಎನ್ನಿಸಿಕೊಂಡಿರುವ ಸಿ.ಪುಟ್ಟಸ್ವಾಮಿ, ರಾಮು, ಲಕ್ಷ್ಮಣಸ್ವಾಮಿ ಅವರು ಹಸಿರು ಟವಲ್ ಇಲ್ಲದ ಪಚ್ಚೆ ನಂಜುಂಡಸ್ವಾಮಿ ಅವರನ್ನು ಕರೆಸಿ ನನ್ನ ವಿರುದ್ಧ ಸಲ್ಲದ ಆರೋಪ ಮಾಡಿಸಿದ್ದಾರೆ~ ಎಂದು ಕಿಡಿಕಾರಿದರು.`ಸಂಘಟನೆಯ ಹೆಸರಿನಲ್ಲಿ ಯಾವುದೇ ತಪ್ಪು ಮಾಡದಿರುವ ನನಗೆ ಒಂದು ವಾರದ ಗಡುವು ನೀಡಲು ಇವರ‌್ಯಾರು. ರೈತ ಸಂಘದ ಆಶಯಗಳನ್ನು ತಿಳಿದು ರೈತರಪರ ಕೆಲಸ ಮಾಡುವುದನ್ನು ಅವರು ಮೊದಲು ಕಲಿಯಲಿ~ ಎಂದು ಲಕ್ಷ್ಮಿ ನಾರಾಯಣಗೌಡ ಅವರು ದೂರಿದರು.ರೈತ ಮುಖಂಡರಾದ ಜೆ.ಕೃಷ್ಣಪ್ಪ, ಪುಟ್ಟರಾಜು, ಶ್ರೀನಿವಾಸ್, ಹಬೀಬುಲ್ಲಾ, ಮುನಿರಾಜು, ರೈತ ಮಹಿಳೆಯರಾದ ಪ್ರೇಮಮ್ಮ, ಲಕ್ಷ್ಮಮ್ಮ, ಗೌರಮ್ಮ, ಸರೋಜಮ್ಮ, ಸಾವಿತ್ರಮ್ಮ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry