ಎಂಡೊಸಲ್ಫಾನ್: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ತರಾಟೆ

7

ಎಂಡೊಸಲ್ಫಾನ್: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ತರಾಟೆ

Published:
Updated:

ನವದೆಹಲಿ (ಪಿಟಿಐ): ಎಂಡೊಸಲ್ಫಾನ್ ಬಳಕೆ ನಿಷೇಧಿಸುವ ವಿಷಯದಲ್ಲಿ ಖಚಿತ ನಿಲುವು ತೆಗೆದುಕೊಳ್ಳದ ಕೇಂದ್ರ ಸರ್ಕಾರವನ್ನು ಮಂಗಳವಾರ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು. ಇದೇ ವೇಳೆ ಈ ರಾಸಾಯನಿಕದ ಬಳಕೆ ಮತ್ತು ತಯಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸುವ ಕುರಿತು ವರದಿ ಸಲ್ಲಿಸಲು ತಜ್ಞರ ಸಮಿತಿಯನ್ನು ಕೂಡ ರಚಿಸಿತು.ಇದನ್ನು ಸಂಪೂರ್ಣ ನಿಷೇಧಿಸಿದರೆ ಆರ್ಥಿಕ ನಷ್ಟವಾಗುತ್ತದೆಂಬ, ಇಲ್ಲದಿದ್ದರೆ ಮಾನವ ಹಾನಿ ಆಗುತ್ತದೆಂಬ ಗೊಂದಲವಿದೆ. ಸರ್ಕಾರವನ್ನು ಪ್ರತಿನಿಧಿಸುವ ಯಾರಾದರೊಬ್ಬರು ಈ ಕುರಿತು ಖಚಿತ ನಿಲುವು ತೆಗೆದುಕೊಳ್ಳಲಿ ಎಂದು ನ್ಯಾಯಮೂರ್ತಿಗಳಾದ ಸ್ವತಂತ್ರ ಕುಮಾರ್ ಮತ್ತು ಮದನ್ ಬಿ.ಲೋಕೂರ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry