ಎಂಥಾ ಕಾಲ ಬಂತು ನೋಡಿ !

7

ಎಂಥಾ ಕಾಲ ಬಂತು ನೋಡಿ !

Published:
Updated:
ಎಂಥಾ ಕಾಲ ಬಂತು ನೋಡಿ !

ಬಾಗಲಕೋಟೆ: ಹಾವು, ಕಪ್ಪೆಯನ್ನು ನುಂಗುವುದು ಸಹಜ ಆದರೆ ಕಪ್ಪೆಯೇ ಹಾವನ್ನು ನುಂಗಿದರೆ...

ಹೌದು, ಇಂತಹ ಅಪರೂಪದ ಘಟನೆ ವಿದ್ಯಾಗಿರಿಯ ಅಯೋಧ್ಯೆ ಹೋಟೆಲ್ ಸಮೀಪದ ಚರಂಡಿಯಲ್ಲಿ ಶುಕ್ರವಾರ ನಡೆಯಿತು.ಕಪ್ಪೆಯೊಂದು ದೊಡ್ಡ ಗಾತ್ರದ ಹಾವೊಂದನ್ನು ನುಂಗುವ ಈ ಅಪರೂಪದ ದೃಶ್ಯವನ್ನು ಸುತ್ತಲಿನ ಜನತೆ ಕುತೂಹಲದಿಂದ ವೀಕ್ಷಿಸಿದರು.   ಸುಮಾರು ಎರಡೂವರೆ ಅಡಿ ಉದ್ದನೆಯ ಹಾವೊಂದು ಚಿಕ್ಕ ಕಪ್ಪೆಯೊಂದನ್ನು ತಿನ್ನಲು ಮುನ್ನುಗ್ಗಿತು. ಇದಕ್ಕೆ ಬಗ್ಗದ ಕಪ್ಪೆ ಹಾವಿನೊಂದಿಗೆ ತೀವ್ರವಾಗಿ ಸೆಣಸಿತು. ಹೊಯ್ದಾಟದಲ್ಲಿ ಸೋತ ಹಾವನ್ನು ಕಪ್ಪೆಯೇ  ಅಚ್ಚುಕಟ್ಟಾಗಿ ನುಂಗಿ ಹಾಕಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry