ಎಂಪಿಪಿ ಆದರ್ಶ ರಾಜಕಾರಣಕ್ಕೆ ಮಾದರಿ

7

ಎಂಪಿಪಿ ಆದರ್ಶ ರಾಜಕಾರಣಕ್ಕೆ ಮಾದರಿ

Published:
Updated:

ಹೂವಿನಹಡಗಲಿ: ಕೆಟ್ಟು ಹೋಗಿರುವ ರಾಜ್ಯ ರಾಜಕಾರಣಕ್ಕೆ ಮುತ್ಸದ್ಧಿ ನಾಯಕ ಎಂ.ಪಿ.ಪ್ರಕಾಶ್‌ರ ಆದರ್ಶ ಅವಶ್ಯವಾಗಿವೆ ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಹೇಳಿದರು.ಪಟ್ಟಣದ ರಂಗಭಾರತಿ ರಂಗಮಂದಿರದಲ್ಲಿ ಬುಧವಾರ ರಾತ್ರಿ ನಡೆದ ಮಾಜಿ ಉಪಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶ್‌ರ ಪ್ರಥಮ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಂ.ಪಿ.ಪ್ರಕಾಶ್‌ರಂತಹ ಮುತ್ಸದ್ದಿ ಗಳು  ಸದನದಲ್ಲಿ ಇಲ್ಲದಿರುವುದು ರಾಜ್ಯ ವಿಧಾನಸಭೆ ದಿಕ್ಕು ತಪ್ಪುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಎಂ.ಪಿ.ಪ್ರಕಾಶರು ರಾಷ್ಟ್ರದ ಶ್ರೇಷ್ಠ ಸಂಸದೀಯ ಪಟುವಾಗಿದ್ದರು  ಅವರ ಭಾಷೆ, ನಡವಳಿಕೆ, ಕರ್ತವ್ಯ, ಶಿಸ್ತು ಬದ್ಧ ರಾಜಕಾರಣದಿಂದಾಗಿ ನನ್ನಂತಹ ಅನೇಕ ರಾಜಕಾರಣಿಗಳು ಪಾಠ ಕಲಿತಿದ್ದೆೀವೆ ಎಂದರು.ನಾಡಿನ ಅಭಿವೃದ್ಧಿ  ವಿಷಯದಲ್ಲಿ ಅವರು ಎಂದೂ ರಾಜಕಾರಣ ಮಾಡುತ್ತಿರಲಿಲ್ಲ. ಜಾತಿ, ಹಣದಂತಹ ಕೆಟ್ಟ ಶಕ್ತಿಗಳ ವಿರುದ್ಧ  ಪ್ರಕಾಶ್ ಸಾತ್ವಿಕ ಹೋರಾಟ ನಡೆಸಿ ರಾಜ್ಯದಲ್ಲಿ ಒಂದು ಶಕ್ತಿಯಾಗಿ ಹೊರ ಹೊಮ್ಮಿದ್ದರು ಎಂದರು.ವಾರಸುದಾರರ ಮೇಲೂ ಕೂಡ ಸಾಮಾಜಿಕ  ಜವಾಬ್ದಾರಿಗಳಿವೆ. ಜನರ ನಿರೀಕ್ಷೆ ಹುಸಿ ಮಾಡದೇ ಅವರ ಹೆಜ್ಜೆಯಲ್ಲಿ ಎಂ.ಪಿ.ರವೀಂದ್ರ ಸಾಗಬೇಕಾಗಿದೆ ಎಂದರು.ಚಲನಚಿತ್ರ ಹಾಗೂ ರಂಗಕಲಾವಿದ ಮಂಡ್ಯ ರಮೇಶ ಮಾತನಾಡಿ ಮಾನವೀಕ ನೆಲೆಗಟ್ಟಿನಲ್ಲಿ ಚಿಂತನೆ ಮಾಡಿದ ಸಾಂಸ್ಕೃತಿಕ ರಾಜಕಾರಣಿ  ಎಂ.ಪಿ.ಪ್ರಕಾಶ್ ಅವರ ವ್ಯಕ್ತಿತ್ವ ನಾಡಿಗೆ ಮಾದರಿಯಾಗಿದೆ ಎಂದರುಯೆಷ್ಟೇಲ್ಲಾ ಕಾರ್ಯಗಳ ಮಧ್ಯೆ ರಂಗಭೂಮಿ ಮೂಲಕ ಸಾಮಾಜಿಕ ಬದಲಾವಣೆಯ ಕನಸು ಕಂಡ ಅವರು  ಸೃಜನ ಶೀಲ ರಾಜಕಾರಣಿ ಎಂದರು.ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ ನಮ್ಮ ತಂದೆ ಹಾಗೂ ಎಂ.ಪಿ.ಪ್ರಕಾಶ್ ಅವರು ತಾವು ನಂಬಿದ  ಸಮಾಜವಾದ ಸಿದ್ಧಾಂತದ ಮೇಲೆ ನಂಬಿ ರಾಜಕಾರಣ ಮಾಡಿದಂತವರು.ನನಗೆ ತಂದೆ ಸಮಾನರಾಗಿದ್ದ ಪ್ರಕಾಶ್ ಅಪ್ಪಾಜಿಯವರು ನಮಗೆ ಉತ್ತಮ ಸಲಹೆಗಳನ್ನು ನೀಡುತ್ತಿದ್ದರು. ನಾು ಮತ್ತು ಎಂ.ಪಿ.ರವೀಂದ್ರ ಅಣ್ಣ-ತಮ್ಮರಿಗಿಂತ ಹೆಚ್ಚು ನಾವು ಒಂದೇ ಕುಟುಂಬದವರು ಎಂದರು.ಎಂ.ಪಿ.ಪ್ರಕಾಶ್ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಸೊಪ್ಪಿನ ಬಾಳಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ. ರವೀಂದ್ರ, ಜಿ.ಪಂ.ಉಪಾಧ್ಯಕ್ಷ ಕೆ.ಚನ್ನ ಬಸವನ ಗೌಡ, ಮಾಜಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ, ವೀ.ವಿ. ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ, ಕಾರ್ಯದರ್ಶಿ ಗುರುಸಿದ್ದಸ್ವಾಮಿ, ವಕೀಲ ಟಿ.ಹೆಚ್.ಎಂ. ವಿರುಪಾಕ್ಷಯ್ಯ, ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೆ. ಹಾಲೇಶ್, ಬಿ.ಕೆ.ಪ್ರಕಾಶ್, ಸಹರಾ ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಾರದ ಗೌಸ್ ಮೊಹಿದ್ದೀನ್, ಕನಕ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಆರ್.ಪಕ್ಕೀರಪ್ಪ ಉಪಸ್ಥಿತರಿದ್ದರು.ಎಂ.ಎಂ.ಶಿವಪ್ರಕಾಶ ಸಂಪಾದಿಸಿದ  ಮುತ್ಸದ್ದಿ ಎಂ.ಪಿ.ಪ್ರಕಾಶ್  ಸಂಪುಟ -2 ಲೋಕಾರ್ಪಣೆ ಮಾಡಲಾಯಿತು.

ಹೊನ್ನಾಳಿ ಹಿರೇ ಕಲ್ಮಠದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಗವಿಮಠದ ಹಿರಿಶಾಂತವೀರ ಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಪ್ರಕಾಶ್ ಜೈನ್ ಸಂಗಡಿಗರು ಪ್ರಾರ್ಥನೆ ಹಾಡಿದರು. ಪ್ರೊ.ಶಾಂತ ಮೂರ್ತಿ .ಬಿ.ಕುಲಕರ್ಣಿ ಸ್ವಾಗತಿಸಿದರು. ಎಸ್.ದ್ವಾರಕೀಶ ರೆಡ್ಡಿ ನಿರೂಪಿಸಿದರು.ನಂತರ ಧಾರವಾಡ ರಂಗಾಯಣ ತಂಡದಿಂದ ಡಾ.ಪ್ರಕಾಶ್ ಗರುಡ ಅವರ ನಿರ್ದೇಶನದ ದ.ರಾ.ಬೇಂದ್ರೆಯವರ ಜಾತ್ರೆ ಮತ್ತು ಸಾಯೋ ಆಟ ನಾಟಕ ಪ್ರದರ್ಶನಗೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry