ಎಂ.ಪಿ. ಪ್ರಕಾಶ್‌ಗೆ ಶ್ರದ್ಧಾಂಜಲಿ

7

ಎಂ.ಪಿ. ಪ್ರಕಾಶ್‌ಗೆ ಶ್ರದ್ಧಾಂಜಲಿ

Published:
Updated:

ಬಾಗಲಕೋಟೆ: ಬುಧವಾರ ನಿಧನರಾದ ಹಿರಿಯ ಮುತ್ಸದ್ದಿ, ಸಮಾಜವಾದಿ, ಮಾಜಿ  ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರಿಗೆ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಬುಧವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಮುಖಂಡರು, ಪ್ರಕಾಶ್ ಅವರ ಪ್ರಾಮಾಣಿಕತೆ ಮತ್ತು ಸಾಮಾಜಿಕ ಕಾಳಜಿಯ ಗುಣಗಾನ ಮಾಡಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಸೌದಾಗರ, ವಿಧಾನಪರಿಷತ್ ಸದಸ್ಯ ಎಸ್.ಆರ್.ಪಾಟೀಲ, ಮಾಜಿ ಸಚಿವರಾದ ಎಚ್.ವೈ.ಮೇಟಿ, ಅಜೇಯ ಕುಮಾರ ಸರನಾಯಕ, ಮಾಜಿ ಶಾಸಕ ಜೆ.ಟಿ. ಪಾಟೀಲ, ಡಾ.ರಾಜಶೇಖರ ಕಂಠಿ, ಮಹಿಳಾ ಘಟಕದ ಅಧ್ಯಕ್ಷೆ ಮಾಧವಿ ರಾಠೋಡ, ನಗರ ಅಧ್ಯಕ್ಷ ಜಾಕೀರ್ ಮೊಕಾಶಿ, ಮೈನುದ್ದೀನ್ ನಬೀವಾಲೆ, ಎ.ಎ.ದಂಡಿಯಾ, ಜಿಪಂ ಸದಸ್ಯ ಬಸವರಾಜ ಮೇಟಿ, ಮಾಜಿ ಸದಸ್ಯ ಗುಂಡಪ್ಪ ಮೇಟಿ, ನಗರಸಭೆ ಸದಸ್ಯೆ ಮಂಜುಳಾ ಭೂಸಾರೆ, ಎಚ್.ಎಲ್.ರೇಶ್ಮಿ, ವಿಜಯಕುಮಾರ ಕಮತಗಿ, ಮಲ್ಲಿಕಾರ್ಜುನ ಶಿರೂರ, ನಿಂಗನಗೌಡ ಪಾಟೀಲ, ಜ್ಯೋತಿಬಾ ದೇವರೆ, ನೀಲಪ್ಪ ಕೋಟಿಕಲ್, ಮಲ್ಲಿಕಾರ್ಜುನ ಮೇಟಿ, ಎಚ್.ಬಿ.ಬೆಳಗಲ್, ತಾಜುದ್ದೀನ್ ಕೊಣ್ಣೂರ ಮತ್ತಿತರರು ಪಾಲ್ಗೊಂಡಿದ್ದರು.

ಡಾ.ದೇವರಾಜ್ ಪಾಟೀಲ ಕಾರ್ಯಕ್ರಮವನ್ನು ನಿರೂಪಿಸಿದರು.ಕಸಾಪ ಸಂತಾಪ:ಮಾಜಿ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್, ರಂಗಭೂಮಿ ಕಲಾವಿದ ಗುಡಗೇರಿ ಬಸವರಾಜ್ ಹಾಗೂ ಚುಟುಕು ಕವಿ ಎಚ್.ವಿ.ತುಂಗಳ ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ ಸಂತಾಪ ವ್ಯಕ್ತಪಡಿಸಿದೆ.ಪರಿಷತ್‌ನ ಸಭಾ ಭವನದಲ್ಲಿ ಬುಧವಾರ ನಡೆದ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಎಸ್.ಜಿ.ಕೋಟಿ ಅವರು ಮಾಜಿ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಹಾಗೂ ರಂಗಭೂಮಿ ಕಲಾವಿದ ಬಸವರಾಜ್ ಅವರ ಜೀವನಸಾಧನೆಯನ್ನು ವಿವರಿಸಿದರು.ಜಿಲ್ಲೆಯೊಂದಿಗೆ ಅವರು ಹೊಂದಿದ್ದ ಒಡನಾಟವನ್ನು ಸ್ಮರಿಸಿಕೊಂಡ ಕೋಟಿ, ಅಗಲಿದ ಗಣ್ಯರ ಆತ್ಮಕ್ಕೆ ಚಿರಶಾಂತಿ ಕೋರಿದರು.ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಪ್ರಕಾಶ್ ಖಾಡೆ, ಉಮೇಶ ತಿಮ್ಮಾಪುರ, ಮಲ್ಲಿಕಾರ್ಜುನ ಚಲವಾದಿ, ಪ್ರೊ.ಜೋಶಿ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.ಜಂಗಮ ಸಮಾಜದ ಸಂತಾಪ

ಬಾಗಲಕೋಟೆ: ವೀರಶೈವ ಸಮಾಜದ ಮುಖಂಡ ಹಾಗೂ ರಾಜಕೀಯ ಮುತ್ಸದ್ದಿ, ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ನಿಧನಕ್ಕೆ ಜಂಗಮರ ಕ್ಷೇಮಾಭಿವೃದ್ಧಿ ಸಂಘ ಸಂತಾಪ ವ್ಯಕ್ತಪಡಿಸಿದೆ.ಎಂ.ಪಿ.ಪ್ರಕಾಶ್ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಜಂಗಮ ಸಮಾಜದವರು ಸಭೆ ಸೇರಿ ಸಂತಾಪ ಸೂಚಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಎನ್.ಪುರಾಣಿಕಮಠ ಹಾಗೂ ಪ್ರಧಾನ ಕಾರ್ಯದರ್ಶಿ ಬಸವರಾಜ ಪರ್ವತಿಮಠ, ‘ಕಳಂಕರಹಿತ ರಾಜಕಾರಣಿಯಾಗಿದ್ದ ಪ್ರಕಾಶ್ ಅವರು ಅಧಿಕಾರಕ್ಕೆ ಅಂಟಿಕೊಳ್ಳದೇ ನಿಸ್ವಾರ್ಥ ಸೇವೆ ಸಲ್ಲಿಸಿದರು’ ಎಂದು ಹೇಳಿದರು.ರಾಜಕೀಯ ಮಾತ್ರವಲ್ಲದೇ ಕಲೆ, ಸಂಸ್ಕೃತಿ, ಸಾಹಿತ್ಯದಲ್ಲೂ ಆಸಕ್ತಿ ಹೊಂದಿದ್ದ ಪ್ರಕಾಶ್, ಹಲವಾರು ನಾಟಕಗಳನ್ನು ರಚಿಸಿ ಸ್ವತಃ ಅಭಿನಯಿಸಿದ್ದಾರೆ ಎಂದು ನೆನಪಿಸಿಕೊಂಡರು.

ಪ್ರಕಾಶ್ ಅವರ ನಿಧನದಿಂದ ಜಂಗಮ ಸಮಾಜಕ್ಕೆ ಮಾತ್ರವಲ್ಲದೇ ಇಡೀ ವೀರಶೈವ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ದುಃಖ ವ್ಯಕ್ತಪಡಿಸಿದರು.ಸಮಾಜದ ಉಪಾಧ್ಯಕ್ಷ ವಿ.ಬಿ.ಚೌಕಿಮಠ, ಜೆ.ಬಿ.ಇದ್ದಲಗಿಮಠ, ಜೆ.ಕೆ.ಬಳೂಲಮಠ, ಎಸ್.ಬಿ.ಗವಿಮಠ, ಕುಮಾರ ಹಿರೇಮಠ, ಮಹಾಲಿಂಗಯ್ಯ ಹಿರೇಮಠ, ಶಿವು ಗೌಡರ, ಬಸವರಾಜ ಹಿರೇಮಠ ಮತ್ತಿತರರು ಸಂತಾಪ ವ್ಯಕ್ತಪಡಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry