ಮಂಗಳವಾರ, ನವೆಂಬರ್ 12, 2019
28 °C

ಎಂಬಿಎ ಪದವೀಧರ: ಮಂಡ್ಯದ ಉಮೇದುವಾರ!

Published:
Updated:

ಮಂಡ್ಯ: ಅಮೆರಿಕಾದಲ್ಲಿ ಬಿಸಿನೆಸ್ ಅಡ್ಮನಿಸ್ಟ್ರೇಷನ್ ಅಧ್ಯಯನ ಮುಗಿಸಿಕೊಂಡು ಬಂದಿದ್ದ ಅವರು, ನೌಕರಿ ಮಾಡಿಕೊಂಡು ಕುಟುಂಬದೊಂದಿಗೆ ಹಾಯಾಗಿ ಇದ್ದು ಬಿಡಬಹು ದಿತ್ತು. ಕುಟುಂಬದ ರಾಜಕೀಯ ಹಿನ್ನೆಲೆ ಹಾಗೂ ಬದಲಾವಣೆಯ ತುಡಿತದ ಕಾರಣದಿಂದ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಯುವಕರೊಬ್ಬರು ಕಣಕ್ಕೆ ಇಳಿದಿದ್ದಾರೆ.ಮೈಸೂರಿನ ರಾಮಕೃಷ್ಣ ವಿದ್ಯಾಶಾಲಾದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪೂರ್ಣಗೊಳಿಸಿ ರುವ 30 ವರ್ಷದ ಯುವಕ ಅಶೋಕ್ ಜಯರಾಂ ಅವರು, `ಪಿಸಿಎಂ'ನಲ್ಲಿ 300ಕ್ಕೆ 296 ಅಂಕ ಗಳಿಸಿದ್ದರು. ಮುಂದೆ ಮೈಸೂರಿನ ಜಯ ಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿ ನಲ್ಲಿ ಇನ್‌ಫಾರ‌್ಮೇಶನ್ ಸೈನ್ಸ್‌ನಲ್ಲಿ ಎಂಜಿನಿಯ ರಿಂಗ್ ಪದವಿ ಗಳಿಸಿ, ಬೆಂಗಳೂರಿನಲ್ಲಿರುವ ಚೈನಾದ ಹುವಾವೇ ಟೆಕ್ನಾಲಜಿ ಕಂಪೆನಿಯಲ್ಲಿ 4 ವರ್ಷಗಳ ಕಾಲ ನೌಕರಿ ಮಾಡಿದ್ದು, ತಿಂಗಳಿಗೆ 80 ಸಾವಿರಕ್ಕೂ ಹೆಚ್ಚು ಸಂಬಳ ಪಡೆಯುತ್ತಿದ್ದರು.`ಮುಂದೆ ಅಮೆರಿಕಾದ ಯುನಿವರ್ಸಿಟಿ ಆಫ್ ನಾರ್ಥ್ ಕ್ಯಾರೊಲಿನಾದಲ್ಲಿ 2011ರಲ್ಲಿ ಎಂಬಿಎ ಪೂರ್ಣಗೊಳಿಸಿದರು. ಎಂಬಿಎ ಅಧ್ಯಯನದಲ್ಲಿ ಬಡ ಜನರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಯಲ್ಲಿ ಹೇಗೆ ಬದಲಾ ವಣೆ ಮಾಡಬೇಕು ಎಂಬ ಅಧ್ಯಯನ ಮಾಡಿದರು. ಕುಟುಂಬದ ಹಿನ್ನೆಲೆಯ ಜತೆಗೆ ಈ ಅಧ್ಯಯನದಿಂ ದಾಗಿ ಸಮಾಜದ ಕೆಳವರ್ಗ ದವರ ನೋವುಗ ಳಿಗೆ ಸ್ಪಂದಿಸ ಬೇಕು' ಎಂದು ರಾಜಕೀಯ ಕ್ಕೆ ಕಾಲಿಟ್ಟೆ ಎನ್ನುತ್ತಾರೆ ಅಶೋಕ್ ಜಯರಾಂ.ಅಶೋಕ್ ಜಯರಾಂ ಅವರ ತಂದೆ ದಿವಂಗತ ಎಸ್.ಡಿ. ಜಯರಾಂ ಅವರು ಜಿಲ್ಲೆಯ ಪ್ರಭಾವಿ ರಾಜಕೀಯ ನಾಯಕ ರಲ್ಲಿ ಒಬ್ಬರು. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಅವರು, ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿ ದ್ದರು. 1998ರಲ್ಲಿ ಮುಖ್ಯಮಂತ್ರಿ ಜೆ.ಎಸ್. ಪಟೇಲ್ ಅವರ ಅಧಿಕಾರವಧಿಯಲ್ಲಿ ಸಚಿವರಾಗಿ ದ್ದಾಗಲೇ ನಿಧನರಾದರು. ಆಗ ನಡೆದ ಉಪಚುನಾವಣೆಯಲ್ಲಿ ಅವರ ಪತ್ನಿ ಪ್ರಭಾವತಿ ಜಯರಾಂ ಅವರು ಗೆಲುವು ಸಾಧಿಸುತ್ತಾರೆ.ಅವೆುರಿಕಾದಲ್ಲಿ ಅಧ್ಯಯನ ಮಾಡುವಾಗಲೇ ಭಾರತದಲ್ಲಿ ಬಂದು ಏನಾದರೂ ಮಾಡಬೇಕು ಎಂದು ನಿರ್ಧರಿಸಿದ್ದೆ. ಅಲ್ಲಿಯವರೆಗೆ ರಾಜಕೀಯ ದಿಂದ ದೂರವಿದ್ದ ನಾನು, 2011ರಲ್ಲಿ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಂಡ್ಯದಲ್ಲಿ ಗುರುತಿಸಿಕೊಂಡೆ. ಹಾಗೆಯೇ ಜೆಡಿಎಸ್‌ಗೂ ಸೇರ್ಪಡೆಗೊಂಡೆ ಎನ್ನುತ್ತಾರೆ ಅವರು.ಸಾಮಾಜಿಕವಾಗಿ ತೊಡಗಿಸಿಕೊಳ್ಳಲು ಬಹುತೇಕರು ಹಿಂದೇಟು ಹಾಕುತ್ತಾರೆ. ವ್ಯವಸ್ಥೆ ಯಲ್ಲಿ ಬದಲಾವಣೆ ತರಬೇಕು ಎಂಬ ಉದ್ದೇಶ ದಿಂದ ರಾಜಕೀಯಕ್ಕೆ ಬಂದಿದ್ದೇನೆ. ಜತೆಗೆ ತಂದೆ ಯವರಿಗೆ ಇದ್ದ ಸಾಮಾಜಿಕ ಕಳಕಳಿ ಹಾಗೂ ಅವರ ಬಗ್ಗೆ ಜಿಲ್ಲೆಯ ಜನತೆ ಇಂದಿಗೂ ಇಟ್ಟಿರುವ ಪ್ರೀತಿ ನನ್ನನ್ನು ರಾಜಕೀಯಕ್ಕೆ ಎಳೆದು ತಂದಿತು ಎಂದರು.ಜೆಡಿಎಸ್‌ನಲ್ಲಿಯೂ ಕೆಲವು ಏರುಪೇರುಗಳಿವೆ. ಬದಲಾವಣೆ ಒಂದೇ ಬಾರಿ, ಒಂದೇ ಹಂತದಲ್ಲಿ ಆಗುವುದಿಲ್ಲ. ಬದಲಾವಣೆ ತರಲು ಅವಕಾಶ ಕ್ಕಾಗಿ ಕಾಯಬೇಕು. ಅದನ್ನು ಸಾಧಿಸಲು ಒಂದು ಪಕ್ಷದಲ್ಲಿ ಗುರುತಿಸಿಕೊಳ್ಳುವುದು ಅನಿವಾರ್ಯ ವಾಗಿತ್ತು. ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದೆ. ಜೆಡಿಎಸ್ ಈ ಬಾರಿ ಟಿಕೆಟ್ ನೀಡದಿದ್ದರಿಂದಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದೇನೆ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)