ಎಂಬಿಬಿಎಸ್ ಪ್ರವೇಶ: ಋಣಾತ್ಮಕ ಅಂಕ ಕೈಬಿಡಲು ನಿರ್ಧಾರ

7

ಎಂಬಿಬಿಎಸ್ ಪ್ರವೇಶ: ಋಣಾತ್ಮಕ ಅಂಕ ಕೈಬಿಡಲು ನಿರ್ಧಾರ

Published:
Updated:

ನವದೆಹಲಿ (ಪಿಟಿಐ): ಮುಂದಿನ ವರ್ಷದ ಉದ್ದೇಶಿತ ಎಂಬಿಬಿಎಸ್ ಪ್ರವೇಶ ಪರೀಕ್ಷೆಯಲ್ಲಿ ಋಣಾತ್ಮಕ ಅಂಕಗಳನ್ನು ಕೈಬಿಡಲು  ಭಾರತೀಯ ವೈದ್ಯಕೀಯ ಮಂಡಳಿಯ ಆಡಳಿತ ಮಂಡಳಿ ಸದಸ್ಯರು ಸೋಮವಾರ ನಿರ್ಧರಿಸಿದ್ದಾರೆ.ಆದರೆ ಸಮ ಅಂಕಗಳನ್ನು ಪಡೆದವರಲ್ಲಿ ಅಂತಿಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಮಾತ್ರ ಋಣಾತ್ಮಕ ಅಂಕಗಳನ್ನು (ತಪ್ಪು ಉತ್ತರಕ್ಕೆ ಅಂಕ ಕಡಿತ) ಬಳಸುವ ಕ್ರಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.ಕೆ.ಕೆ.ತಲ್ವಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಂಡಳಿಯ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಋಣಾತ್ಮಕ ಅಂಕಗಳನ್ನು ಅಭ್ಯರ್ಥಿ ಪಡೆದ ಒಟ್ಟು ಅಂಕಗಳನ್ನು ಕಡಿಮೆ ಮಾಡಲು ಬಳಸುವಂತಿಲ್ಲ; ಬದಲಿಗೆ ಮೆರಿಟ್ ಅಭ್ಯರ್ಥಿಗಳನ್ನು ನಿರ್ಧರಿಸುವಾಗ ಮಾತ್ರ ಬಳಸಬೇಕು ಎಂದು ಮಂಡಳಿ ನಿರ್ಧರಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry