ಎಂಬೆಡ್ ಮಾಡಿ ಹಂಚಿಕೊಳ್ಳಿ

ಡಿಜಿಟಲ್ ಕ್ರಾಂತಿಯ ಬಳಿಕ ಇ–ಜಗತ್ತಿನಲ್ಲಿ ‘ಹಂಚಿ’ಕೊಳ್ಳುವ ಗುಣ ಹೆಚ್ಚಾಗಿದೆ! ಸುದ್ದಿ, ಫೋಟೊ, ವಿಡಿಯೊ ಹೀಗೆ ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ಏನೇ ಇದ್ದರೂ ಅದನ್ನು ಹಂಚಿಕೊಳ್ಳುವುದೊಂದು ಸಾಮಾನ್ಯ ರೂಢಿ. ಹಂಚಿಕೊಳ್ಳುವ ಈ ಕಾರ್ಯದಲ್ಲಿ ಕಾಲಕಾಲಕ್ಕೆ ಹಲವು ಬದಲಾವಣೆಗಳಾಗಿವೆ.
ಕೇವಲ Share this ಲಿಂಕ್ ಕ್ಲಿಕ್ಕಿಸಿ ಫೇಸ್ಬುಕ್, ಟ್ವಿಟರ್, ವಾಟ್ಸ್ಆ್ಯಪ್, ಗೂಗಲ್+ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಹಲವರ ಅಭ್ಯಾಸ.ಇಷ್ಟವಾದ ಫೋಟೊ, ವಿಡಿಯೊ, ಲಿಂಕ್ಗಳನ್ನು ಶೇರ್ ಮಾಡುವುದಷ್ಟೇ ಅಲ್ಲದೆ ಎಂಬೆಡ್ ಮಾಡಿ ಫೇಸ್ಬುಕ್, ಟ್ವಿಟರ್, ಬ್ಲಾಗ್ಗಳಲ್ಲಿ ಹಂಚಿಕೊಳ್ಳಬಹುದು. ಹೀಗೆ ಎಂಬೆಡ್ ಮಾಡಿ ಹಂಚಿಕೊಳ್ಳುವ ಲಿಂಕ್ ಮೂಲತಾಣದ ರೂಪದಲ್ಲೇ ಹಂಚಿಕೊಂಡ ಕಡೆಯೂ ಕಾಣಿಸುತ್ತದೆ.
ಎಂಬೆಡ್ ಮಾಡಿದ ವಿಡಿಯೊಗಳು ಹಂಚಿಕೊಂಡ ತಾಣದಲ್ಲೇ ಮೂಲರೂಪದಂತೆಯೇ ಪ್ಲೇ ಆಗುತ್ತವೆ. ಉದಾಹರಣೆಗೆ ಯೂಟ್ಯೂಬ್ನ ವಿಡಿಯೊ ಒಂದನ್ನು ನೀವು ಎಂಬೆಡ್ ಮಾಡಿ ನಿಮ್ಮ ಬ್ಲಾಗ್ನಲ್ಲಿ ಮೊದಲು HTML ಕ್ಲಿಕ್ಕಿಸಿ ಬಳಿಕ ಕೆಳಗೆ ಎಂಬೆಡ್ ಮಾಡಿದ ಲಿಂಕ್ ಪೇಸ್ಟ್ ಮಾಡಿ ಮತ್ತೆ HTML ಕ್ಲಿಕ್ ಮಾಡಿದರೆ ವಿಡಿಯೊ ನಿಮ್ಮ ಬ್ಲಾಗ್ನ ಪೇಜ್ನಲ್ಲಿ ತೆರೆದುಕೊಳ್ಳುತ್ತದೆ. ಹೀಗೆ ಎಂಬೆಡ್ ಮಾಡಿದ ವಿಡಿಯೊ ಬಗ್ಗೆ ನಿಮ್ಮ ಮಾತುಗಳನ್ನು ಇಲ್ಲಿ ಸೇರಿಸಬಹುದು.
ವಿಡಿಯೊ ಬಗ್ಗೆ ಉಪಯುಕ್ತ ಮಾಹಿತಿ, ಆಸಕ್ತಿಕರ ಸಂಗತಿಗಳಿದ್ದರೆ ಅವನ್ನೂ ಜತೆಗೆ ಹಂಚಿಕೊಳ್ಳಬಹುದು. ಹೀಗೆ ಹಂಚಿಕೊಳ್ಳುವ ಪ್ರಕ್ರಿಯೆಯಲ್ಲಿ ಹಕ್ಕುಸ್ವಾಮ್ಯದ ಪ್ರಶ್ನೆ ಏಳುವುದಿಲ್ಲ. ಏಕೆಂದರೆ ಹಂಚಿಕೊಳ್ಳುವ ಕೆಲಸ ಕಳ್ಳತನವಲ್ಲ! ವಿಡಿಯೊ ಟ್ವೀಟ್ ಮಾಡಿದಂತೆಯೇ, ಫೇಸ್ಬುಕ್ ಪೇಜ್ನ ಯಾವುದೇ ಪೋಸ್ಟ್, ಟ್ವಿಟರ್ನಲ್ಲಿನ ಯಾವುದೇ ಟ್ವೀಟ್ಗಳನ್ನು ಎಂಬೆಡ್ ಮಾಡಿಕೊಳ್ಳಲು ಸಾಧ್ಯ. ವಿಷಯ ಒಂದನ್ನು ಸಮಗ್ರವಾಗಿ ಹಾಗೂ ವಿವಿಧ ಅಧ್ಯಯನ ಸಾಮಗ್ರಿಗಳೊಂದಿಗೆ ವಿಶ್ಲೇಷಿಸುವ ಮನೋಭಾವ ಹೊಂದಿರುವವರಿಗೆ ಈ ಎಂಬೆಡ್ ಪ್ರಕ್ರಿಯೆ ಹೆಚ್ಚು ಸಹಾಯಕವಾಗಬಲ್ಲದು.
ಯಾವುದೇ ಲಿಂಕ್ ಎಂಬೆಡ್ ಮಾಡಿ ಹಂಚಿಕೊಳ್ಳುವಾಗ ಎಂಬೆಡ್ ಲಿಂಕ್ ಸರಿಯಾಗಿ ಕಾಪಿ ಮಾಡಿಕೊಳ್ಳಬೇಕು. ಲಿಂಕ್ನ ಜತೆಗೆ ಒಂದು ಚುಕ್ಕಿ ಸೇರಿಕೊಂಡರೂ ಮೂಲ ರೂಪ ನಿಮ್ಮ ಪೇಜ್ನಲ್ಲಿ ತೆರೆದುಕೊಳ್ಳುವುದಿಲ್ಲ. ಹಲವರೊಂದಿಗೆ, ಹಲವು ವಿಷಯಗಳನ್ನು ಹಂಚಿಕೊಳ್ಳುತ್ತಾ, ಹಲವು ವಿಷಯಗಳ ಬಗ್ಗೆ ಆಧಾರ ಸಹಿತ ನಿರೂಪಿಸಲು ಎಂಬೆಡ್ ಸಹಕಾರಿ.
ಎಂಬೆಡ್ ಮಾಡಿದ ಪೇಜ್ಗೆ ಮಾಡಿದ ಲೈಕ್ಗಳು, ವಿಡಿಯೊ ವೀಕ್ಷಕರ ಸಂಖ್ಯೆಯ ಕ್ರೆಡಿಟ್ಗಳೆಲ್ಲಾ ಅದರ ಮೂಲ ತಾಣಕ್ಕೇ ಸಲ್ಲುತ್ತವೆ. ಅಲ್ಲದೆ ಹಂಚಿಕೊಳ್ಳಲಿರುವ ಮೂಲ ಪೇಜ್ನ ವಿಷಯ ವಸ್ತುವಿನಲ್ಲಿ ಯಾವುದೇ ಬದಲಾವಣೆ ಮಾಡಲು ಇಲ್ಲಿ ಅವಕಾಶವಿರುವುದಿಲ್ಲ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.