ಶುಕ್ರವಾರ, ನವೆಂಬರ್ 15, 2019
22 °C

ಎಂಸಿಎಫ್‌ಎಲ್: ಷೇರು ಮಾರಾಟ

Published:
Updated:

ನವದೆಹಲಿ (ಪಿಟಿಐ): ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಜರ್ಸ್ (ಎಂಸಿಎಫ್‌ಎಲ್) ಪ್ರವರ್ತಕ ಸಂಸ್ಥೆ ಮ್ಯಾಕ್‌ಡ್ವೆಲ್ ಹೋಲ್ಡಿಂಗ್ಸ್  ತನ್ನ ಪಾಲಿನಲ್ಲಿ ಶೇ 1.01ರಷ್ಟು ಷೇರುಗಳನ್ನು ರೂ.3.4 ಕೋಟಿಗೆ ಮಾರಾಟ ಮಾಡಿದೆ.ಮ್ಯಾಕ್‌ಡ್ವೆಲ್ ಹೋಲ್ಡಿಂಗ್ಸ್ ಮಾರ್ಚ್ 28ರಂದು ಒಟ್ಟು 12 ಲಕ್ಷ ಷೇರುಗಳನ್ನು ಮಾರಾಟ  ಮಾಡಿದೆ ಎಂದು ಯುಬಿ ಸಮೂಹದ ಒಡೆತನಕ್ಕೆ ಸೇರಿದ       `ಎಂಸಿಎಫ್‌ಎಲ್' ಮುಂಬೈ ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿರುವ ವರದಿಯಲ್ಲಿ  ತಿಳಿಸಿದೆ.ಷೇರು ಮಾರಾಟದ ನಂತರ `ಎಂಸಿಎಫ್‌ಎಲ್'ನಲ್ಲಿ ಮ್ಯಾಕ್‌ಡ್ವೆಲ್   ಹೋಲ್ಡಿಂಗ್ಸ್‌ನ ಪಾಲು ಶೇ 4.92ಕ್ಕೆ ಕುಸಿದಿದೆ.ಕಳೆದ ವಾರ `ಎಸ್‌ಬಿಐ' `ಎಂಸಿಎಫ್‌ಎಲ್'ನಲ್ಲಿ ತಾನು ಹೊಂದಿದ್ದ ಪಾಲಿನಲ್ಲಿ  ಶೇ 10ರಷ್ಟನ್ನು  (ಸುಮಾರು 1 ಕೋಟಿ ಷೇರುಗಳು) ಮಾರಾಟ ಮಾಡಿತ್ತು. ಪ್ರತಿಸ್ಪರ್ಧಿ ಕಂಪೆನಿ ಜುವಾರಿ ಫರ್ಟಿಲೈಜರ್ಸ್ ಈ ಷೇರುಗಳನ್ನು ಖರೀದಿಸಿತ್ತು.ಪ್ರವರ್ತಕ ಸಂಸ್ಥೆಗಳಾದ ಯುನೈಟೆಡ್ ಬ್ರಿವರಿಸ್ ಹೋಲ್ಡಿಂಗ್ಸ್, ಯುನೈಟೆಡ್ ಸ್ಪಿರಿಟ್ ಮತ್ತು ಮ್ಯಾಕ್‌ಡ್ವೆಲ್ ಸಮೂಹ ಸೇರಿ ಒಟ್ಟಾರೆ `ಎಂಸಿಎಫ್‌ಎಲ್'ನಲ್ಲಿ ಶೇ 30.44ರಷ್ಟು ಪಾಲು ಹೊಂದಿದ್ದವು. ಮಾರಾಟದ ಬಳಿಕ ಒಟ್ಟಾರೆ ಪಾಲು     ಶೇ 70ರಷ್ಟು ಕುಸಿತ ಕಂಡಿದೆ.

ಪ್ರತಿಕ್ರಿಯಿಸಿ (+)