ಎಂ.ಸಿ.ಮರಿಗಂಗಣ್ಣ ಇನ್ನಿಲ್ಲ

7

ಎಂ.ಸಿ.ಮರಿಗಂಗಣ್ಣ ಇನ್ನಿಲ್ಲ

Published:
Updated:
ಎಂ.ಸಿ.ಮರಿಗಂಗಣ್ಣ ಇನ್ನಿಲ್ಲ

ಮಾಗಡಿ: ರಾಜ್ಯದಲ್ಲಿ ಪ್ರಥಮ ಭಾರಿಗೆ ರೇಷ್ಮೆ ಕೈಮಗ್ಗ ಸಹಕಾರ ಸಂಘವನ್ನು ಆರಂಭಿಸಿ ಅದರ ಸಂಸ್ಥಾಪಕ ಕಾರ್ಯದರ್ಶಿಯಾಗಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ ಎಂ.ಸಿ.ಮರಿಗಂಗಣ್ಣ (92) ಶುಕ್ರವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಘಾತದಿಂದ ನಿಧನರಾದರು.

 

ಮೃತರು ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮರಿಗಂಗಣ್ಣ ಎರಡು ಭಾರಿ ಮಾಗಡಿ ಪುರಸಭೆಯ ಅಧ್ಯಕ್ಷರಾಗಿಯೂ ಸೇವೆ ಸ್ಲ್ಲಲಿಸಿದ್ದರು. ಸರಳತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದ ಮರಿಗಂಗಣ್ಣ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಮಾಸಾಶನವನ್ನು ಪಡೆಯದೆ ಬದುಕು ನಡೆಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry