ಎಂ.ಹೊಸಳ್ಳಿ: ಕೊಡ ನೀರಿಗೆ ಎರಡು ರೂಪಾಯಿ

7

ಎಂ.ಹೊಸಳ್ಳಿ: ಕೊಡ ನೀರಿಗೆ ಎರಡು ರೂಪಾಯಿ

Published:
Updated:

ಯಾದಗಿರಿ: ಒಂದು ಕೊಡ ನೀರು ಬೇಕೆಂದರೆ 2 ರೂಪಾಯಿ ಖರ್ಚು ಮಾಡಲೇ ಬೇಕು. ದೂರದ ಹಳ್ಳಿಯ ಕೊಳವೆ ಬಾವಿಯಿಂದ ಸಂಗ್ರಹಿಸಿದ ನೀರನ್ನೇ ಇಲ್ಲಿಯ ಜನರು ಕುಡಿಯ ಬೇಕು. ಸುಮಾರು 150 ಕುಟುಂಬಗಳ ನಿತ್ಯದ ಬವಣೆ ಇದು.ಜಿಲ್ಲಾ ಕೇಂದ್ರವಾದ ಯಾದಗಿರಿಯ ಸನಿಹದಲ್ಲಿಯೇ ಇರುವ ಎಂ. ಹೊಸಳ್ಳಿ ಕ್ರಾಸ್‌ನಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಿ ರುವ ಬುಡ್ಗ ಜಂಗಮ ಶಿಳ್ಳೆಕ್ಯಾತ ಜನಾಂಗ ಸುಮಾರು 250-300 ಜನರು ವಾಸಿಸುತ್ತಿದ್ದು, ನಿತ್ಯವೂ ನೀರಿಗಾಗಿ ಪರದಾಡುವಂತಾಗಿದೆ. ಈ ಪ್ರದೇಶದಲ್ಲಿ ಯಾವುದೇ ಮೂಲ ಸೌಲಭ್ಯಗಳು ಇಲ್ಲ. ಆದರೆ ಮನುಷ್ಯ ನಿಗೆ ಅಗತ್ಯವಾಗಿರುವ ನೀರೂ ಸಿಗ ದಂತಾಗಿರುವುದು ಇಲ್ಲಿನ ಜನರಿಗೆ ಬೇಸರವನ್ನು ಉಂಟು ಮಾಡಿದೆ.ಅಲೆಮಾರಿ ಬುಡ್ಗ ಜನಾಂಗದವರು ಹಲವಾರು ವರ್ಷಗಳಿಂದ ನಗರದಲ್ಲಿ ಗುಡಿಸಲು ಹಾಕಿಕೊಂಡು ಇಲ್ಲಿಯ ಚಿರಂಜೀವಿ ಶಾಲೆಯ ಬಳಿ ವಾಸ ವಾಗಿದ್ದರು. ಕೆಲ ಕಾರಣಗಳಿಂದಾಗಿ ಎಂ. ಹೊಸಳ್ಳಿ ಕ್ರಾಸ್‌ನಲ್ಲಿರುವ ಸರ್ಕಾರಿ ಜಾಗೆಗೆ ಇವರನ್ನು ಸ್ಥಳಾಂತರ ಮಾಡಲಾಯಿತು. ಆದರೆ ಇಲ್ಲಿ ವಾಸಿಸುವ ಜನರಿಗೆ ವಿದ್ಯುತ್, ನೀರು ಸೇರಿದಂತೆ ಯಾವುದೇ ಸೌಲಭ್ಯಗಳು ಇಲ್ಲ. ಇದರಿಂದಾಗಿ ಇಲ್ಲಿಯ ಜನರು ನೀರಿಗಾಗಿಯೂ ನಿತ್ಯ ಪರದಾಡು ವಂತಾಗಿದೆ.ಕುಡಿಯುವ ನೀರಿಗಾಗಿ ಗುಡಿಸಲು ಇರುವ ಜಾಗೆಯಲ್ಲಿ ಬೋರವೆಲ್ ಹಾಕಿಸಿಕೊಡಬೇಕು ಎಂದು ರಾಜ್ಯ ಬುಡ್ಗ ಜಂಗಮ ಕ್ಷೇಮಾಭಿವೃದ್ಧಿ ಸಂಘವು ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿದೆ. ಕಳೆದ ಡಿ.10 ರಂದೇ ಈ ಮನವಿ ಮಾಡಲಾಗಿದೆ. ಮನವಿಯ ಕುರಿತು ಕೂಲಂಕಷವಾಗಿ ಪರಿಶೀಲನೆ ಮಾಡಿ, ನಿಯಮದಂತೆ ಕ್ರಮ ಕೈಗೊ ಳ್ಳಲು ತಹಸೀಲ್ದಾರರು, ನಗರಸಭೆ ಆಯುಕ್ತರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.ಈ ಸೂಚನೆಯ ಅನ್ವಯ ತಹ ಸೀಲ್ದಾರ ಕಚೇರಿಯಿಂದಲೂ ಈ ಬಗ್ಗೆ ಪಂಚಾಯತ್ ರಾಜ್ ಎಂಜಿನಿಯ ರಿಂಗ್ ವಿಭಾಗಕ್ಕೆ ಪತ್ರ ಬರೆದು 15 ದಿನದಲ್ಲಿ ಬೊರವೆಲ್ ಹಾಕಿಸಿಕೊಡು ವುದಾಗಿ ಭರವಸೆಯೂ ಸಿಕ್ಕಿದೆ. ಆದರೆ ಇದೆಲ್ಲವೂ ಕಾಗದದಲ್ಲಿಯೇ ಉಳಿದಿದೆ ಎನ್ನುತ್ತಾರೆ ಸಂಘದ ಬಿ.ಎಲ್. ಆಂಜನೇಯ.2 ರೂಪಾಯಿ ಕೊಡಬೇಕು: “ನಮಗೆ ನೀರು ಬೇಕಂದ್ರೆ ಹೊಸಳ್ಳಿಗೆ ಹೋಗಬೇಕ್ರಿ. ಅಲ್ಲಿ ಬೋರವೆಲ್‌ನಿಂದ ನೀರ ಹೊಡದ ಇಡಬೇಕು. ಅಟೋ ಮಾಡಿಕೊಂಡು, ಒಂದು ಕೊಡಕ್ಕೆ 2 ರೂಪಾಯಿ ಕೊಡಬೇಕು. ಅಂದ್ರ ಮಾತ್ರ ನಮಗ ಕುಡಿಯೋ ನೀರು ಸಿಗೋದು. ಇಲ್ಲ ಅಂದ್ರೆ ಹಂಗೆ ಇರ ಬೇಕು ನೋಡ್ರಿ” ಎನ್ನುವುದು ಇಲ್ಲಿನ ನಿವಾಸಿಗಳ ಅಳಲು.ನಿತ್ಯ ಕುಡಿಯುವ ನೀರು ತರಲು ಇಲ್ಲಿನ ಜನರು ಹೊಸಳ್ಳಿಗೆ ಹೋಗು ತ್ತಾರೆ. ಅಲ್ಲಿರುವ ಕೈಪಂಪ್‌ನಿಂದ ಕೊಡ ದಲ್ಲಿ ನೀರು ಸಂಗ್ರಹಿಸುತ್ತಾರೆ. ನಂತರ ಅಟೋ ರಿಕ್ಷಾದಲ್ಲಿ ನೀರು ತುಂಬಿದ ಕೊಡಗಳನ್ನು ಹಾಕಿಕೊಂಡು ಬರು ತ್ತಾರೆ. ಈ ರೀತಿ ನೀರು ಹೊತ್ತು ತರಲು ಅಟೋ ರಿಕ್ಷಾಗಳಿಗೆ ಕೊಡಕ್ಕೆ 2 ರೂಪಾಯಿಯಂತೆ ಬಾಡಿಗೆ ನೀಡ ಬೇಕು. ಹೀಗಾಗಿ ಇಲ್ಲಿನ ಜನರು ಹಣ ಕೊಟ್ಟು ನೀರು ಕುಡಿಯುವ ಪರಿಸ್ಥಿತಿ ಎದುರಾಗಿದೆ.ಮನುಷ್ಯನ ಜೀವನಕ್ಕೆ ಅಗತ್ಯಗಳಲ್ಲಿ ಒಂದಾಗಿರುವ ನೀರು ಒದಗಿಸಲು ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳ ಬೇಕು ಎಂದು ಬುಡ್ಗ ಜಂಗಮ ಕ್ಷೇಮಾ ಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ವೈ. ಮಾರುತಿ, ಶಂಕರ ಶಾಸ್ತ್ರಿ, ಶಿಳ್ಳೆಕ್ಯಾತರ ಸಂಘದ ಅಧ್ಯಕ್ಷ ಖಂಡಪ್ಪ, ನಾಗಪ್ಪ, ಶೇಖರ, ಸಾಯಣ್ಣ, ವಿಷ್ಣು ದಾಸನ ಕೇರಿ, ಶರಣಪ್ಪ, ಶಂಕರ ಮುಂತಾ ದವರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry