ಎಎಂಡಿ ವಿಂಡೋಸ್ ಆಂಡ್ರಾಯ್ಡ!

7

ಎಎಂಡಿ ವಿಂಡೋಸ್ ಆಂಡ್ರಾಯ್ಡ!

Published:
Updated:

ಸ್ಮಾರ್ಟ್‌ಫೋನ್‌ಗಳ ಓಟದಲ್ಲಿ ಆಂಡ್ರಾಯ್ಡ ಕಾರ್ಯನಿರ್ವಹಣಾ ವ್ಯವಸ್ಥೆ ಹೊಂದಿರುವ ಫೋನು   ಗಳದ್ದೇ ಕಾರುಬಾರು. ಹೀಗಾಗಿ ತಂತ್ರಾಂಶ ಅಭಿವೃದ್ಧಿಪಡಿಸುವ ಹಲವರು ನಿತ್ಯ ಹೊಸ ಮೊಬೈಲ್ ಅಪ್ಲಿಕೇಷನ್ಸ್ ಬಿಡುಗಡೆ ಮಾಡುತ್ತಲೇ ಇದ್ದಾರೆ. ಕೇವಲ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರ ಸೀಮಿತವಾಗಿದ್ದ ಆಂಡ್ರಾಯ್ಡ ಅಪ್ಲಿಕೇಷನ್ಸ್ ಇನ್ನು ಮುಂದೆ ಡೆಸ್ಕ್‌ಟಾಪ್ ಸಿಸ್ಟೆಂಗಳಲ್ಲೂ ಲಭ್ಯ.ಎಎಂಡಿ ಎಂಬ ಮೈಕ್ರೊಪ್ರೊಸೆಸರ್ ಹಾಗೂ `ಚಿಪ್~ ತಯಾರಿಸುವ ಕಂಪೆನಿ ಆಂಡ್ರಾಯ್ಡ ಮಾರುಕಟ್ಟೆಯಲ್ಲಿ ಲಭ್ಯವಿರುವ ಲಕ್ಷಾಂತರ ಅಪ್ಲಿಕೇಷನ್‌ಗಳನ್ನು ಡೆಸ್ಕ್‌ಟಾಪ್ ಮಾದರಿಗೆ ಪರಿವರ್ತಿಸುವ ಬೃಹತ್ ಯೋಜನೆಗೆ ಕೈಹಾಕಿದೆ.

 

ಈ ಕಾರ್ಯದಲ್ಲಿ ಜತೆಗೂಡಿರುವ `ಅಡ್ವಾನ್ಸ್ಡ್ ಮೈಕ್ರೊ ಡಿವೈಸಸ್~(ಎಎಂಡಿ) ಕಂಪೆನಿಯು ತಾನು ತಯಾರಿಸಿದ ಕಂಪ್ಯೂಟರ್ ಹಾಗೂ ಟ್ಯಾಬ್ಲೆಟ್‌ಗಳಲ್ಲಿ ಐದು ಲಕ್ಷ ಆಂಡ್ರಾಯ್ಡ ಅಪ್ಲಿಕೇಷನ್ಸ್ ಅಳವಡಿಸಿದೆ. ಈ ಅಪ್ಲಿಕೇಷನ್‌ಗಳನ್ನು ಬಳಕೆದಾರರು `ಎಎಂಡಿ~ಯ ಆ್ಯಪ್‌ಝೋನ್ ಪ್ಲೇಯರ್ ಎಂಬ ಸೂರಿನಡಿ ಪಡೆದು ಬಳಸಬಹುದು.ಎಎಂಡಿ ಪ್ರೊಸೆಸರ್ ಹಾಗೂ ವಿಂಡೋಸ್ 7 ಹಾಗೂ 8 ಆಪರೇಟಿಂಗ್ ಸಿಸ್ಟೆಂಗಳಿರುವ ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ಹಾಗೂ ಟ್ಯಾಬ್ಲೆಟ್‌ಗಳಲ್ಲಿ ಇಂಥ ಲಕ್ಷಾಂತರ ಬಗೆಯ ಅಪ್ಲಿಕೇಷನ್ಸ್ ಬಳಸಬಹುದಾಗಿದೆ.ಒಂದೊಮ್ಮೆ ಹೊಸ ಕಂಪ್ಯೂಟರ್ ಖರೀದಿಸಲು ಸಾಧ್ಯವಾಗದಿದ್ದಲ್ಲಿ ಈಗ ಇರುವ `ಎಎಂಡಿಪ್ರೊಸೆಸರ್~ನ ಕಂಪ್ಯೂಟರ್‌ನಲ್ಲಿಯೇ ವಿಂಡೋಸ್ ಅಪ್ಲಿಕೇಷನ್‌ಗಳ ಮೇಲೆ ಮಾಸ್ಟರ್ ಆಂಡ್ರಾಯ್ಡ ಡೌನ್‌ಲೋಡ್ ಮಾಡಿಕೊಂಡು, `ಎಎಂಡಿ ಆಪ್‌ಝೋನ್ ಪ್ಲೇಯರ್~ ಸೌಲಭ್ಯ ಪಡೆಯಬಹುದಾಗಿದೆ ಅಥವಾ ಎಎಂಡಿ ಆಪ್‌ಝೋನ್ ಮೂಲಕ ಆಂಡ್ರಾಯ್ಡ ಅಪ್ಲಿಕೇಷನ್ ಡೌನ್ ಮಾಡಿಕೊಂಡಲ್ಲಿ ತನ್ನಿಂತಾನೇ ಈ ಪ್ಲೇಯರ್ ಕಂಪ್ಯೂಟರ್‌ನಲ್ಲಿ ಅನುಷ್ಠಾನ ಗೊಳ್ಳುತ್ತದೆ.ಹಾಗೆಂದ ಮಾತ್ರಕ್ಕೆ ಆಂಡ್ರಾಯ್ಡ ಅಪ್ಲಿಕೇಷನ್ಸ್ ಕೇವಲ ಎಎಂಡಿ ಪ್ರೊಸೆಸರ್ ಇರುವ ಕಂಪ್ಯೂಟರ್‌ಗಳಿಗೆ ಮಾತ್ರ ಎಂದು ಅರ್ಥವಲ್ಲ. ಬ್ಲೂಸ್ಟಾಕ್‌ನ ವಿಂಡೋಸ್ ಸಾಫ್ಟ್‌ವೇರ್ ಮೂಲಕ ಇಂಟೆಲ್ ಪ್ರೊಸೆಸರ್ ಇರುವ ಕಂಪ್ಯೂಟರ್‌ಗಳಲ್ಲಿಯೂ ಈ ಅಪ್ಲಿಕೇಷನ್ ಬಳಸಬಹುದಾಗಿದೆ.ಆ್ಯಪ್‌ಝೋನ್ ಪ್ಲೇಯರ್‌ಗಳನ್ನು ಎಎಂಡಿಯ `ಜಿಪಿಯು~ ಹಾಗೂ `ಎಪಿಯು~ ತಂತ್ರಜ್ಞಾನದ ಕಂಪ್ಯೂಟರ್‌ಗಳಲ್ಲಿ ಬಳಸುವಂತೆಯೂ ವಿನ್ಯಾಸಗೊಳಿಸಲಾಗಿದೆ.

ಪ್ರಳಯವಾದರೂ ಡಾಟಾಕಾರ್ಡ್ ಸುರಕ್ಷಿತ!

ಈ ಭೂಮಿಯ ಮೇಲೆ ಶಾಶ್ವತ ಎನ್ನುವುದು ಯಾವುದೂ ಇಲ್ಲ. ಆದರೆ 10 ಕೋಟಿ ವರ್ಷದವರೆಗೂ ಬಾಳಿಕೆ ಬರುವ ಡಾಟಾಕಾರ್ಡ್‌ವೊಂದನ್ನು ಜಪಾನಿನ `ಹಿಟಾಚಿ~ ಕಂಪೆನಿ ಅಭಿವೃದ್ಧಿಪಡಿಸಿದೆ. ಬಹುಬಗೆ ರಾಸಾಯನಿಕಗಳಿಗೂ ಜಗ್ಗದ ಹಾಗೂ ರೇಡಿಯೋ ವೇವ್ಸ್‌ಗಳಿಂದಲೂ ಹಾನಿಗೊಳಗಾಗದ, ಬೆಂಕಿಯಲ್ಲಿಯೂ ಸುಟ್ಟುಹೋಗದ, ಸುನಾಮಿ ಅಪ್ಪಳಿಸಿದರೂ ನಾಶವಾಗದು ಈ `ಚಿಪ್~ ಎಂದು ಕಂಪೆನಿ ಹೇಳಿರುವುದಾಗಿ ಡೈಲಿ ಮೇಲ್ ವರದಿ ಮಾಡಿದೆ.ಸಂಗ್ರಹಿತ ದತ್ತಾಂಶಗಳು, ಮಾಹಿತಿ ಕಣಜಕ್ಕೆ ಕಿಂಚಿತ್ತೂ ಹಾನಿಯಾಗದೆ ಸುರಕ್ಷಿತವಾಗಿಡುವುದು ಈ ಚಿಪ್‌ನ ಕಾಯಕ. ಪ್ರತಿಕೂಲ ಸನ್ನಿವೇಶದಲ್ಲಿಯೂ ಅದರಲ್ಲಿನ ಮಾಹಿತಿಯು ಸುರಕ್ಷಿತವಾಗಿರುವಂತೆ ಅಭಿವೃದ್ಧಿಪಡಿಸಲಾಗಿದೆ.ಈ ನೂತನ ಜಲನಿರೋಧಕ ಡಾಟಾಕಾರ್ಡ್, ತೀವ್ರ ಸ್ವರೂಪದ ತಾಪಮಾನದಲ್ಲಿಯೂ ತನ್ನಲ್ಲಿ ಸಂಗ್ರಹವಾಗಿರುವ ದತ್ತಾಂಶ ಕಣಜಕ್ಕೆ ಯಾವುದೇ ರೀತಿ ಹಾನಿಯಾಗದಂತೆ ಸಂರಕ್ಷಿಸುವಂತಹ ಸಾಮರ್ಥ್ಯ ಹೊಂದಿದೆ ಎನ್ನುತ್ತಾರೆ ಕಂಪೆನಿ ಸಂಶೋಧಕರು.`ಇಂದು ಸಿಡಿ ಮತ್ತು ಕೆಲ ಹಾರ್ಡ್ ಡ್ರೈವ್‌ಗಳಲ್ಲಿನ ಮಾಹಿತಿಗಳು ನಾಶವಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಅವುಗಳಲ್ಲಿನ ದತ್ತಾಂಶಗಳ ಜೀವತಾವಧಿಯು ಕೆಲವು ದಶಕ ಅಥವಾ ಒಂದು ಶತಮಾನಕ್ಕೆ ಮಾತ್ರ ಸೀಮಿತವಾಗಿರುತ್ತದೆ.ಹಲವು ಸಂದರ್ಭಗಳಲ್ಲಿ ದತ್ತಾಂಶಗಳನ್ನು ಸುರಕ್ಷಿತವಾಗಿ ಕಾಯ್ದಿಡುವಲ್ಲಿ ವಿಫಲವಾದ ಉದಾಹರಣೆಗಳಿವೆ. ಆದರೆ, ಈ ಹೊಸ ಡಾಟಾಕಾರ್ಡ್ ಹೆಚ್ಚು ಉಪಯುಕ್ತ ಹಾಗೂ ದತ್ತಾಂಶ ಕಾಯ್ದಿಡುವುದರಲ್ಲಿ ಹೆಚ್ಚು ಸಮರ್ಥ. ದತ್ತಾಂಶಗಳನ್ನು ತೆಳುವಾದ ಸ್ಫಟಿಕದಲ್ಲಿ ಶೇಖರಿಸಿಡುವಂತಹ ನೂತನ ತಂತ್ರಜ್ಞಾನದಡಿ ಇದನ್ನು ಅಭಿವೃದ್ಧಿ ಪಡಿಸಲಾಗಿದೆ~ ಎಂದಿದ್ದಾರೆ ಹಿಟಾಚಿ ಕಂಪೆನಿ ಸಂಶೋಧಕ ಕಝ್ಯೋಷಿ ಟೋರೈ.`ಹೊಸ ಡಾಟಾಕಾರ್ಡನ್ನು ಮೊದಲಿಗೆ ಪ್ರಾಯೋಗಿಕವಾಗಿ ಸರ್ಕಾರಿ ಸಂಸ್ಥೆ, ವಸ್ತು ಸಂಗ್ರಾಹಲಯ ಮತ್ತು ಧಾರ್ಮಿಕ ಸಂಸ್ಥೆಗಳ ಮಾಹಿತಿಗಳ ಸಂಗ್ರಹ ಸೇವೆಗಳಲ್ಲಿ ಬಳಸಲಾಗುತ್ತದೆ~ ಎಂದಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry