ಎಎಎ ಅಧ್ಯಕ್ಷ ಚುನಾವಣೆ: ಕಲ್ಮಾಡಿಗೆ ಸೋಲು

ಭಾನುವಾರ, ಜೂಲೈ 21, 2019
27 °C

ಎಎಎ ಅಧ್ಯಕ್ಷ ಚುನಾವಣೆ: ಕಲ್ಮಾಡಿಗೆ ಸೋಲು

Published:
Updated:

ಪುಣೆ (ಪಿಟಿಐ): ಪ್ರತಿಷ್ಠಿತ ಏಷ್ಯನ್ ಅಥ್ಲೆಟಿಕ್ಸ್ ಒಕ್ಕೂಟ (ಎಎಎ)ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾಣೆಯಲ್ಲಿ ಕಾಮನ್‌ವೆಲ್ತ್  ಕ್ರೀಡಾಕೂಟ ಹಗರಣದ ಪ್ರಮುಖ ಆರೋಪಿ ಸುರೇಶ್ ಕಲ್ಮಾಡಿ ಅವರು ಪರಾಭವಗೊಂಡಿದ್ದು, ಕತಾರ್‌ನ ಜುಮಾನ್- ಆಲ್-ಹಮದ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಕಳೆದ 13 ವರ್ಷಗಳಿಂದ ಎಎಎ ಅಧ್ಯಕ್ಷರಾಗಿದ್ದ ಕಲ್ಮಾಡಿ ಈ ಭಾರಿ ನಡೆದ ಚುನಾವಣೆಯಲ್ಲಿ ಸೋಲುಂಡರು. ಕತಾರ್‌ನ ಅಥ್ಲೆಟಿಕ್ಸ್ ಫೆಡರೇಷನ್‌ನ ಅಧ್ಯಕ್ಷರಾಗಿರುವ ಹಮದ್ ಅವರು 20 ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದರು. ಕಲ್ಮಾಡಿ 18 ಮತಗಳನ್ನು ಪಡೆದರು.2000ನೇ ವರ್ಷದಲ್ಲಿ ಕಲ್ಮಾಡಿ ಮೊದಲ ಭಾರಿಗೆ ಎಎಎನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಾಲ್ಕನೇ ಬಾರಿ ಆಯ್ಕೆಯಾಗಬೇಕೆಂಬ ಅವರು ಕನಸನ್ನು ಹಮದ್ ಭಗ್ನಗೊಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry