ಎಎಐಪಿಎಲ್‌ ಘಟಕ ಆರಂಭ

7
ವಿಮಾನ ಬಿಡಿ ಭಾಗಗಳ ಉತ್ಪಾದನೆ

ಎಎಐಪಿಎಲ್‌ ಘಟಕ ಆರಂಭ

Published:
Updated:

ಬೆಳಗಾವಿ:  ಇಲ್ಲಿಗೆ ಸಮೀಪದ ಕ್ವೆಸ್ಟ್‌ ಗ್ಲೋಬಲ್‌ ಮ್ಯಾನುಫ್ಯಾಕ್ಚರಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಹಾಗೂ ಸ್ವೀಡನ್‌ ದೇಶದ  ‘ಸಾಬ್ (ಎಸ್‌ಎಎಬಿ) ಎಬಿ’ ಕಂಪೆನಿಯ ಜಂಟಿ ಸಹಭಾಗಿತ್ವದಲ್ಲಿ ವಿಮಾನಗಳ ಬಿಡಿ ಭಾಗಗಳನ್ನು ಉತ್ಪಾದಿಸುವ ‘ಏರೋಸ್ಟ್ರ­ಕ್ಚರ್‌ ಅಸೆಂಬ್ಲಿಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌’ (ಎಎಐ­ಪಿಎಲ್‌) ಕಂಪೆನಿ ಗುರುವಾರ ಇಲ್ಲಿ  ಆರಂಭವಾಯಿತು.ಎಎಐನಲ್ಲಿ ಸದ್ಯ ಸುಮಾರು ₨10 ಕೋಟಿ  ಬಂಡವಾಳ ಹೂಡಲಾಗಿದ್ದು, ಮುಂದಿನ ನಾಲ್ಕು ವರ್ಷಗಳ ಬಳಿಕ ಪ್ರತಿ ವರ್ಷ ಕನಿಷ್ಠ ₨ 20 ಕೋಟಿ ವಹಿವಾಟು ನಡೆಸುವ ಗುರಿ ಹೊಂದಿದೆ. ಬೆಳಗಾವಿ ಸಮೀಪದ ಹತ್ತರಗಿಯಲ್ಲಿ ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕ್ವೆಸ್ಟ್‌ ಗ್ಲೋಬಲ್‌ ಅವರು ಅಭಿವೃದ್ಧಿಪಡಿಸಿದ ವಿಶೇಷ ಆರ್ಥಿಕ ವಲಯ (ಎಸ್‌ಇಝಡ್‌) ದಲ್ಲಿ ಈ ಘಟಕ ಸ್ಥಾಪಿಸಿದ್ದು, ಸುಮಾರು 50 ತಂತ್ರಜ್ಞರು ಕಾರ್ಯ ನಿರ್ವಹಿಸುತ್ತಿದ್ದಾರೆ.‘ವಿಮಾನ ಬಿಡಿ ಭಾಗಗಳ ಉತ್ಪಾದನೆಯಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ‘ಸಾಬ್‌ ಎಬಿ’ ಕಂಪೆನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡ ಒಂದು ವರ್ಷದೊಳಗೆ ಈ ಹೊಸ ಯೋಜನೆ ಕಾರ್ಯಾರಂಭ ಮಾಡುತ್ತಿರುವುದು ಸಂತಸ ತಂದಿದೆ.ಈ ಹೊಸ ಮೈಲುಗಲ್ಲಿನೊಂದಿಗೆ ಕ್ವೆಸ್ಟ್‌ ಗ್ಲೋಬಲ್‌ ಮ್ಯಾನುಫ್ಯಾಕ್ಚರಿಂಗ್‌ ಕಂಪೆ­ನಿಯು ವೈಮಾನಿಕ ಜೋಡಣಾ ಮಾರು­ಕಟ್ಟೆಯಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸಿಕೊಳ್ಳಲಿದೆ’ ಎಂದು ಉದ್ಘಾ­ಟನೆ ಬಳಿಕ ಮಾತನಾಡಿದ ಕ್ವೆಸ್ಟ್‌ ಗ್ಲೋಬಲ್‌ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಮೆಳ್ಳಿಗೇರಿ ಅಭಿಪ್ರಾಯಪಟ್ಟರು.‘ಈ ಪಾಲುದಾರಿಕೆಯು ಉತ್ಪಾ­ದನಾ ವೆಚ್ಚ ಕಡಿಮೆಗೊಳಿಸು­ವುದರ ಜೊತೆಗೆ ಅದರ ವಿಶ್ವಾಸಾರ್ಹತೆ ಹೆಚ್ಚಿ­ಸಲಿದೆ. ಸಾಬ್‌ ಅನ್ನು ಜಾಗತಿಕ ಮಟ್ಟದ ಸಂಸ್ಥೆ­ಯಾಗಿ ರೂಪಿಸುವಲ್ಲಿ ಈ ಪಾಲು­ದಾರಿಕೆ ಸಹಕಾರಿಯಾಗಲಿದೆ’ ಎಂದು ‘ಸಾಬ್‌ ಎಬಿ’ ಕಂಪೆನಿಯ ವ್ಯವಸ್ಥಾಪಕ ನಿರ್ದೇ­ಶಕ ಜೆಲ್‌ ಜಾನ್‌ಸನ್‌ ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry