ಗುರುವಾರ , ಮೇ 28, 2020
27 °C

ಎಎಚ್‌ಎಫ್ ಉಪಾಧ್ಯಕ್ಷರಾಗಿ ನರೀಂದರ್ ಬಾತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಹಾಕಿ ಇಂಡಿಯಾ (ಎಚ್‌ಐ) ಕಾರ್ಯದರ್ಶಿ ನರೀಂದರ್ ಬಾತ್ರ ಅವರ ಏಷ್ಯನ್ ಹಾಕಿ ಫೆಡರೇಷನ್‌ನ (ಎಎಚ್‌ಎಫ್) ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಕ್ವಾಲಾಲಾಂಪುರದಲ್ಲಿ ಭಾನುವಾರ ನಡೆದ ಎಎಚ್‌ಎಫ್ ವಾರ್ಷಿಕ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಕಣದಲ್ಲಿದ್ದ 11 ಸ್ಪರ್ಧಿಗಳಲ್ಲಿ ಬಾತ್ರ ಅವರು ಎರಡನೇ ಅತಿಹೆಚ್ಚು ಮತಗಳನ್ನು ಪಡೆದರು.ಸುಲ್ತಾನ್ ಅಜ್ಲಾನ್ ಶಾ ಅವರು ಅಧ್ಯಕ್ಷರಾಗಿ ಮರು ಆಯ್ಕೆಯಾದರು ಎಂದು ಎಚ್‌ಐ ಹೇಳಿಕೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.