ಗುರುವಾರ , ಜೂನ್ 24, 2021
25 °C

ಎಎಪಿಗೆ 100 ಸೀಟು-: ಕೇಜ್ರಿವಾಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ  100 ಸೀಟುಗಳನ್ನು ಗೆಲ್ಲುವುದು ಮತ್ತು ಸರ್ಕಾರದ ರಚನೆಯಲ್ಲಿ ತಮ್ಮ ಬೆಂಬಲ ಅನಿ­ವಾರ್ಯ ಎಂದು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ನರೇಂದ್ರ ಮೋದಿ ಅವರ ಗುಜರಾತ್‌ ಅಭಿವೃದ್ಧಿ  ಮಾದರಿ­ಯನ್ನು ಪ್ರಶ್ನಿಸಿದ ಅವರು ತಾವು ಮಾರ್ಚ್ 5ರಿಂದ 8 ರವರೆಗೆ ಗುಜರಾತ್ ಪ್ರವಾಸ ಮಾಡು­ವುದಾಗಿ ಹೇಳಿದರು. ‘ಅಲ್ಲಿನ ಅಭಿವೃದ್ಧಿ ಮಾದರಿ ನೋಡುವುದಾಗಿ ತಿಳಿಸಿದ ಅವರು ಅಲ್ಲಿ ಅಭಿವೃದ್ಧಿ ನಡೆದಿಲ್ಲ­ವಾದರೆ ಅದನ್ನು ಬಹಿರಂಗ­ಗೊಳಿಸುವುದಾಗಿ ತಿಳಿಸಿ­ದರು.ತಮ್ಮನ್ನು ಟೀ ಮಾರುವವರಾಗಿ ಹೇಳಿಕೊಳ್ಳುವ ಮೋದಿ ಬಳಿ ಪ್ರಯಾಣ ಮಾಡಲು ಹೆಲಿಕಾಪ್ಟರ್ ಎಲ್ಲಿಂದ ಬಂತು ಎಂದು ಪ್ರಶ್ನಿಸಿ­ದರು.ಮುಂಬರುವ ಲೋಕಸಭಾ ಚುನಾ­ವಣೆಯಲ್ಲಿ ನರೇಂದ್ರ ಮೋದಿ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸಿದರೆ ಅವರ ವಿರುದ್ಧ ಅರವಿಂದ ಕೇಜ್ರಿವಾಲ್‌  ಕಣಕ್ಕೆ ಇಳಿಯಲಿದ್ದಾರೆ ಎಂದು ಎಎಪಿ ಮುಖಂಡರು ಇಂಗಿತ ವ್ಯಕ್ತಪಡಿಸಿದ್ದಾರೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.