ಶುಕ್ರವಾರ, ಜೂನ್ 25, 2021
29 °C

ಎಎಪಿಯತ್ತ ಎನ್‌ಆರ್‌ಐ ಒಲವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌ (ಪಿಟಿಐ): ಲೋಕಸಭಾ ಚುನಾವಣೆ ಹತ್ತಿರವಾಗು­ತ್ತಿದ್ದಂತೆಯೇ ಭಾರತದ ರಾಜಕೀಯ ಪಕ್ಷಗಳು ದೇಣಿಗೆ ಪಡೆಯಲು ಮತ್ತು ಪ್ರಚಾರ­ಕ್ಕಾಗಿ ಅಮೆರಿಕದಲ್ಲಿ­ರುವ ಅನಿವಾಸಿ ಭಾರತೀಯರನ್ನು (ಎನ್‌ಆರ್‌ಐ) ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಇನ್ನಿಲ್ಲದ ಬೆವರು ಹರಿಸುತ್ತಿವೆ.ಪ್ರಸ್ತುತ ಈ ಪ್ರಯತ್ನದಲ್ಲಿ ಆಮ್‌ ಆದ್ಮಿ ಪಕ್ಷ (ಎಎಪಿ) ಮುಂಚೂಣಿ­ಯಲ್ಲಿದೆ. ಇದಕ್ಕಾಗಿ ಎಎಪಿ ಇತ್ತೀಚೆಗೆ ಅಂತರ್ಜಾಲ ವೇದಿಕೆ ಆರಂಭಿಸಿದ್ದು ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಬೆಂಬಲ ಕ್ರೋಡೀಕರಿ­ಸಲು ಯತ್ನಿಸು­ತ್ತಿದೆ. ಸುಮಾರು 18 ಸಾವಿರ ಭಾರತ ಮೂಲದ ಅಮೆರಿಕ­ನ್ನರು ಎಎಪಿ ಆರಂಭಿಸಿರುವ ‘ದೂರ­ವಾಣಿ ಕರೆ’ ಕಾರ್ಯಕ್ರಮದಲ್ಲಿ ನೋಂದಣಿ ಮಾಡಿ­­ಕೊಂಡಿದ್ದಾರೆ. ಇವರು ಭಾರತ­ದಲ್ಲಿ ಇರುವ ತಮ್ಮ ಸಂಬಂಧಿ­ಕರು, ಗೆಳೆಯರಿಗೆ ದೂರ­ವಾಣಿ ಕರೆ ಮಾಡಿ ಎಎಪಿಗೆ ಮತ ಹಾಕಲು ವಿನಂತಿಸಿಕೊಳ್ಳಲಿದ್ದಾರೆ.ಮೂರನೇ ಮಹಿಳಾ ಅಭ್ಯರ್ಥಿ ಇಲ್ಮಿ(ಗಾಜಿಯಾ­ಬಾದ್‌ ವರದಿ): ಶಾಜಿಯಾ ಇಲ್ಮಿ ಹೊಸ ಪಕ್ಷ ಎಎಪಿಯಿಂದ ಗಾಜಿಯಾಬಾದ್ ಲೋಕಸಭೆ ಕಣಕ್ಕೆ ಇಳಿದ ಮೊದಲ ಮಹಿಳೆ. ಅವರು ಈ ಕ್ಷೇತ್ರದಿಂದ ಈವರೆಗೆ ಸ್ಪರ್ಧಿಸಿದ ಮೂರನೇ ಮಹಿಳೆಯೂ ಹೌದು.1962ರಲ್ಲಿ ಕಾಂಗ್ರೆಸ್‌ ನಾಯಕಿ ಕಮಲಾ ಚೌಧರಿ ಇಲ್ಲಿಂದ ಗೆದ್ದು ಗಾಜಿಯಾಬಾದ್‌ನ ಮೊದಲ ಸಂಸದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 1996ರಲ್ಲಿ ಕಾಂಗ್ರೆಸ್‌ ರೀತಾ ಸಿಂಗ್‌ ಅವರನ್ನು ಇಲ್ಲಿಂದ ಕಣಕ್ಕೆ ಇಳಿಸಿತ್ತು. ಆದರೆ ಅವರು ಅಲ್ಲಿ ಸೋತ ಮೇಲೆ ಯಾವ ಮಹಿಳೆಯೂ ಇಲ್ಲಿಂದ ಕಣಕ್ಕೆ ಇಳಿಯಲಿಲ್ಲ. ಈಗ ಎಎಪಿ ಇಲ್ಮಿ ಅವರಿಗೆ ಟಿಕೆಟ್‌ ನೀಡುವುದ­ರೊಂದಿಗೆ ಅವರು ಮೂರನೇ ಅಭ್ಯರ್ಥಿಯಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.