ಮಂಗಳವಾರ, ಮೇ 17, 2022
26 °C

ಎಎಫ್‌ಸಿ ಫುಟ್‌ಬಾಲ್: ಭಾರತ ತಂಡಕ್ಕೆ ಸುಲಭ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಸ್ಕತ್: ಭಾರತ ತಂಡದವರು ಶನಿವಾರ ಇಲ್ಲಿ ಆರಂಭವಾದ 22 ವರ್ಷ ವಯಸ್ಸಿನೊಳಗಿನವರ ಎಎಫ್‌ಸಿ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ.ಸುಲ್ತಾನ್ ಕಾಬೂಸ್ ಕ್ರೀಡಾ ಸಮುಚ್ಛಯದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ 5-2 ಗೋಲುಗಳಿಂದ ಲೆಬನಾನ್ ತಂಡವನ್ನು ಮಣಿಸಿತು.ವಿಜಯಿ ತಂಡದ ಮನ್‌ದೀಪ್ ಸಿಂಗ್ (16ನೇ ನಿಮಿಷ), ಅಲ್ವಿನ್ ಜಾರ್ಜ್ (39ನೇ ಹಾಗೂ 55ನೇ ನಿ.), ಜೆಜೆ ಲಾಲ್ಪೆಖ್ಲುವ (71ನೇ ಹಾಗೂ 90ನೇ ನಿ.) ಗೋಲು ಗಳಿಸಿದರು. ಲೆಬನಾನ್ ತಂಡದ ಒಮರ್ ಕುರ್ಡಿ (48ನೇ ನಿ.) ಹಾಗೂ ಅಬ್ದುಲ್ ಫತಾಹ್ (70ನೇ ನಿ.) ಚೆಂಡನ್ನು ಗುರಿ ಸೇರಿಸಿದರು.ಎರಡು ದಿನಗಳ ಹಿಂದೆಯಷ್ಟೇ ಮನ್‌ದೀಪ್ ಅವರ ಅಜ್ಜ ಸಾವನ್ನಪ್ಪಿದರು. ಆದರೆ ತವರೂರು ಹಿಸ್ಸಾರ್‌ಗೆ ಹಿಂತಿರುಗದ ಮನ್‌ದೀಪ್ ಮಸ್ಕತ್ ವಿಮಾನವೇರಿದ್ದರು. ಇಲ್ಲಿ ಒಂದು ಗೋಲು ಗಳಿಸಿ ಮಿಂಚಿದರು.`ಗೋಲು ಗಳಿಸುವ ಮೂಲಕ ನನ್ನ ಅಜ್ಜನಿಗೆ   ಗೌರವ ಸೂಚಿಸಿದ್ದೇನೆ. ಅವರು ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು~ ಎಂದು ಮನ್‌ದೀಪ್ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.