ಎಎಸ್‌ಇಎಂ ಹಣಕಾಸು ಸಚಿವರ ಸಭೆ ಇಂದು

7

ಎಎಸ್‌ಇಎಂ ಹಣಕಾಸು ಸಚಿವರ ಸಭೆ ಇಂದು

Published:
Updated:

ಬ್ಯಾಂಕಾಕ್ (ಪಿಟಿಐ): ಇತ್ತೀಚಿನ ಜಾಗತಿಕ ಹಣಕಾಸು, ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬಲಿಷ್ಠ ಪಾಲುದಾರಿಕೆ ನಿರ್ಮಾಣಕ್ಕೆ ಭಾರತದ ಹಣಕಾಸು ಸಚಿವ ಪಿ.ಚಿದಂಬರಂ ಸೇರಿದಂತೆ ಏಷಿಯಾ ಹಾಗೂ ಯುರೋಪ್ ರಾಷ್ಟ್ರಗಳ ಹಣಕಾಸು ಸಚಿವರುಗಳು ಸೋಮವಾರ ಇಲ್ಲಿ ಸಭೆ ಸೇರಿ ಚರ್ಚಿಸಲಿದ್ದಾರೆ.



ಜಾಗತಿಕ ಅರ್ಥಿಕ ಬಿಕ್ಕಟ್ಟಿನ ಹಿನ್ನೆಲೆ ಯಲ್ಲಿ ಏಷ್ಯಾ ಯೂರೋಪ್ ಸಭೆ (ಎಎಸ್‌ಇಎಂ) ಮಹತ್ವದ್ದಾಗಿದ್ದು, ನಿರ್ಮಾಣ ತಂತ್ರಜ್ಞಾನ ಹಾಗೂ ಹೊಸ ಉದ್ಯೋಗಗಳ ಸೃಷ್ಟಿಗೆ ಹೊಸ ತಿರುವು ನೀಡಿವೆ  ಎಂಬ ಆಶಯವನ್ನು ಥಾಯ್ಲೆಂಡ್ ನಲ್ಲಿ ಭಾರತದ ರಾಯಭಾರಿಯಾಗಿರುವ ಅನಿಲ್ ವಾದ್ವಾ ವ್ಯಕ್ತಪಡಿಸಿದರು.



ನವೆಂಬರ್ 4ರಿಂದ 2 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಈ ಸಭೆಯ ಯಶಸ್ವಿಗೆ ಪ್ರಸಕ್ತ ಹಣಕಾಸು ಸಚಿವರುಗಳ ಸಭೆ ಕೈಗೊಳ್ಳುವ ಪ್ರಮುಖ ನಿರ್ಣಯ ಗಳು ಅಗತ್ಯ ಮಾಹಿತಿ ಒದಗಿಸಲಿವೆ ಎಂದು ವಾದ್ವಾ ತಿಳಿಸಿದರು.



`ಕ್ರೀಯಾಶೀಲ ಪಾಲುದಾರಿಕೆಯನ್ನು ಗಟ್ಟಿಗೊಳಿಸುವುದು ಹಾಗೂ ಕ್ರೀಯಾಶೀಲ ಪ್ರಗತಿಯಲ್ಲಿ ಪಾಲುದಾರಿಕೆ~ ಎಂಬುದು ಈ ಸಭೆಯ ಘೋಷಣೆಯಾಗಿದೆ.



ಎಎಸ್‌ಇಎಂನ 46 ಸದಸ್ಯ ರಾಷ್ಟ್ರಗಳ ಹಣಕಾಸು ಸಚಿವರು ಸೇರಿದಂತೆ ಮೂರು ಆಹ್ವಾನಿತ ರಾಷ್ಟ್ರಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಏಷ್ಯಾ ಅಭಿವೃದ್ಧಿ ಬ್ಯಾಂಕ್, ವಿಶ್ವ ಬ್ಯಾಂಕ್, ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಹಾಗೂ ಯೂರೋಪ್‌ನ ಕೇಂದ್ರ ಬ್ಯಾಂಕ್‌ನ ಅಧಿಕಾರಿಗಳು ಸಭೆಗೆಹಾಜರಾಗುವರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry