ಎಎಸ್‌ಸಿ ತಂಡಕ್ಕೆ ಗೆಲುವು

7
ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್

ಎಎಸ್‌ಸಿ ತಂಡಕ್ಕೆ ಗೆಲುವು

Published:
Updated:

ಬೆಂಗಳೂರು: ಎಎಸ್‌ಸಿ ತಂಡದವರು ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಆಶ್ರಯದ ರಾಜ್ಯ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಸುಲಭ ಗೆಲುವು ಪಡೆದರು.ಅಶೋಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಎಎಸ್‌ಸಿ 3-1 ಗೋಲುಗಳಿಂದ ಸ್ಟೂಡೆಂಟ್ಸ್ ಯೂನಿಯನ್ ತಂಡವನ್ನು ಮಣಿಸಿತು.ಗೆಲುವಿನ ಮೂಲಕ ಎಎಸ್‌ಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಈ ತಂಡ ನಾಲ್ಕು ಪಂದ್ಯಗಳಿಂದ ಏಳು ಪಾಯಿಂಟ್ ಕಲೆಹಾಕಿದೆ. ಇಷ್ಟೇ ಪಂದ್ಯಗಳನ್ನಾಡಿರುವ ಸ್ಟೂಡೆಂಟ್ಸ್ ಯೂನಿಯನ್ ತಂಡ ಮೂರು ಪಾಯಿಂಟ್‌ಗಳನ್ನು ಹೊಂದಿದೆ.ಎಎಸ್‌ಸಿ ತಂಡ ಪಂದ್ಯದುದ್ದಕ್ಕೂ ಪೂರ್ಣ ಪ್ರಭುತ್ವ ಸಾಧಿಸಿತು. 24ನೇ ನಿಮಿಷದಲ್ಲಿ ಅರುಣ್‌ಜೀತ್ ಗಳಿಸಿದ ಗೋಲಿನ ನೆರವಿನಿಂದ ಎಎಸ್‌ಸಿ ವಿರಾಮದ ವೇಳೆಗೆ 1-0 ರಲ್ಲಿ ಮೇಲುಗೈ ಪಡೆದಿತ್ತು. ಎರಡನೇ ಅವಧಿಯಲ್ಲೂ ತಂಡದ ಹಿಡಿತ ಮುಂದುವರಿಯಿತು.65ನೇ ನಿಮಿಷದಲ್ಲಿ ನಿತೇಶ್ ಹಾಗೂ 75ನೇ ನಿಮಿಷದಲ್ಲಿ ಸುಧೀರ್ ಕುಮಾರ್ ಗೋಲು ಗಳಿಸಿ ಎಎಸ್‌ಸಿ ಗೆಲುವನ್ನು ಖಚಿತಪಡಿಸಿಕೊಂಡರು. ಸ್ಟೂಡೆಂಟ್ಸ್ ಯೂನಿಯನ್ ಪರ ಏಕೈಕ ಗೋಲನ್ನು ಫಿಲಿಪ್ 82ನೇ ನಿಮಿಷದಲ್ಲಿ ಗಳಿಸಿದರು.ಬೆಂಗಳೂರು ಕಿಕ್ಕರ್ಸ್‌ಗೆ ಜಯ: `ಎ' ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ದಯಾನಂದ್ ತಂದಿತ್ತ ಏಕೈಕ ಗೋಲಿನ ನೆರವಿನಿಂದ ಬೆಂಗಳೂರು ಕಿಕ್ಕರ್ಸ್ ತಂಡ ಇಸ್ರೋ ವಿರುದ್ಧ ಜಯ ಸಾಧಿಸಿತು. ಪಂದ್ಯದ 58ನೇ ನಿಮಿಷದಲ್ಲಿ ಗೆಲುವಿನ ಗೋಲು ದಾಖಲಾಯಿತು.ಶನಿವಾರ ನಡೆಯುವ ಪಂದ್ಯಗಳಲ್ಲಿ ಎಂಇಜಿ- ಎಡಿಇ ಹಾಗೂ ಜವಾಹರ್ ಯೂನಿಯನ್- ಸಿಐಎಲ್ ತಂಡಗಳು ಪೈಪೋಟಿ ನಡೆಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry