ಎಎಸ್‌ಸಿ ತಂಡಕ್ಕೆ ಜಯ

7

ಎಎಸ್‌ಸಿ ತಂಡಕ್ಕೆ ಜಯ

Published:
Updated:

ಬೆಂಗಳೂರು:  ಎಎಸ್‌ಸಿ ತಂಡ ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ (ಕೆಎಸ್‌ಎಚ್ಎ ) ಆಶ್ರಯದ ರಾಜ್ಯ ‘ಎ’ ಡಿವಿಷನ್ ಹಾಕಿ ಲೀಗ್ ಟೂರ್ನಿಯ ಪಂದ್ಯದಲ್ಲಿ ಜಯ ಸಂಪಾದಿಸಿದೆ.ಕೆಎಸ್‌ಎಚ್‌ಎ ಹಾಕಿ ಕ್ರೀಡಾಂಗಣ ದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಎಎಸ್‌ಸಿ ತಂಡ 4–2 ರಲ್ಲಿ ಸಿನರ್ಜಿ ಎಫ್‌ಸಿ ತಂಡವನ್ನು ಮಣಿಸಿತು. ವಿಜಯಿ ತಂಡದ ಪರ ಆನಂದ್ ನಾಗ್ (15 ನೇ  ನಿಮಿಷ), ಮಹೇಶ್ವರ್ ನಾಗ್ (24 ನಿ), ಸಂಜಯ್‌ ಟೊಪ್ಪೊ (53 ನಿ) ಹಾಗೂ ಗುರಿಯಾ ಭೇಂಗ್ರಾ (58 ನಿ) ತಲಾ ಒಂದು ಗೋಲು ಗಳಿಸಿ ತಂಡದ ಜಯಕ್ಕೆ ಕಾರಣರಾದರು. ಸಿನರ್ಜಿ ತಂಡದ ಪರ ಶ್ರೀಧರ್ ಮತ್ತು ಶಶಾಂಕ್ ಕ್ರಮವಾಗಿ 41 ಹಾಗೂ 46 ನೇ ನಿಮಿಷದಲ್ಲಿ ಗೋಲು ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry