ಎಎಸ್‌ಸಿ- ಪೋಸ್ಟಲ್ ಪಂದ್ಯ ಡ್ರಾ

7

ಎಎಸ್‌ಸಿ- ಪೋಸ್ಟಲ್ ಪಂದ್ಯ ಡ್ರಾ

Published:
Updated:

ಬೆಂಗಳೂರು: ಎಎಸ್‌ಸಿ ಮತ್ತು ಪೋಸ್ಟಲ್ ತಂಡಗಳ ನಡುವಿನ ಬಿಡಿಎಫ್‌ಎ ರಾಜ್ಯ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯ ಗೋಲುರಹಿತ ಡ್ರಾದಲ್ಲಿ ಕೊನೆಗೊಂಡಿತು.ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಎರಡೂ ತಂಡಗಳು ಗೋಲು ಗಳಿಸುವ ಹಲವು ಅವಕಾಶಗಳನ್ನು ಕಳೆದುಕೊಂಡು ನಿರಾಸೆ ಅನುಭವಿಸಿದವು. ಇದೀಗ ಎಎಸ್‌ಸಿ ಮೂರು ಪಂದ್ಯಗಳಿಂದ ನಾಲ್ಕು ಪಾಯಿಂಟ್ ಹೊಂದಿದೆ.ಸೋಮವಾರ ನಡೆದ `ಎ' ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಚಾಂದ್ ಪಾಶಾ (58 ಮತ್ತು 78ನೇ ನಿ.) ತಂದಿತ್ತ ಗೋಲುಗಳ ನೆರವಿನಿಂದ ಸಿಐಎಲ್ 2-0 ರಲ್ಲಿ ಇಸ್ರೋ ವಿರುದ್ಧ ಜಯ ಸಾಧಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry