ಎಕರೆಗೆ ₨15ಲಕ್ಷ ನೀಡಲು ಮನವಿ: ಚಿಂಚನಸೂರು

7

ಎಕರೆಗೆ ₨15ಲಕ್ಷ ನೀಡಲು ಮನವಿ: ಚಿಂಚನಸೂರು

Published:
Updated:

ಗುಲ್ಬರ್ಗ: ಯಾದಗಿರಿಯ ಕಡೆಚೂರ­ಪಾಳ್ಯ ಬಳಿ ನಿರ್ಮಿಸಲು ಉದ್ದೇಶಿಸಿರುವ ಜವಳಿ ಪಾರ್ಕ್‌ಗೆ ಭೂಮಿ ನೀಡಿದವರಿಗೆ  ಎಕರೆಗೆ ₨15 ಲಕ್ಷ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ ಎಂದು ಸಚಿವ ಬಾಬುರಾವ್‌ ಚಿಂಚನಸೂರು ಹೇಳಿದರು.₨10 ಸಾವಿರ ಕೋಟಿಯ ಯೋಜನೆಯನ್ನು ಚೀನಾ ದೇಶದ ತಂತ್ರಜ್ಞಾನದ ಸಹಕಾರದೊಂದಿಗೆ 3,200 ಎಕರೆ ಪ್ರದೇಶದಲ್ಲಿ ಅನುಷ್ಠಾನಗೊಳಿಸಲು ಯೋಜಿಸ­ಲಾಗಿದೆ. ಈಗ ಪ್ರತಿ ಎಕರೆಗೆ ₨6ರಿಂದ 7.5 ಲಕ್ಷ ತನಕ ಪರಿಹಾರ ನೀಡಲಾಗುತ್ತಿದೆ. ಈ ಪೈಕಿ 82 ಎಕರೆ ಜಮೀನಿನ ಮಾಲೀಕರು ನ್ಯಾಯಾಲ­ಯದ ಮೆಟ್ಟಿಲೇರಿರುವ ಕಾರಣ ತಾತ್ಕಾಲಿಕ ತಡೆಯಾಗಿದೆ. ಈ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.ಗುಲ್ಬರ್ಗ ಜವಳಿ ಪಾರ್ಕ್ ಕಾಮಗಾರಿಗೆ ಚಾಲನೆ ದೊರಕಿದೆ. ಎರಡೂ ಪಾರ್ಕ್‌ಗಳು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ  ಪ್ರಯತ್ನದಿಂದ ಸಾಕಾರಗೊಳ್ಳುತ್ತಿದೆ ಎಂದರು.ಮೀನುಗಾರಿಕೆ: ಗುಲ್ಬರ್ಗ–ಯಾದಗಿರಿಯಲ್ಲಿ ಮೀನುಗಾರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮೀನುಗಾರಿಕಾ ಖಾತೆ ಸಚಿವ ಅಭಯಚಂದ್ರ ಜೈನ್‌ ಅವರ ಜೊತೆ ಮಾತನಾಡುತ್ತೇನೆ.ಆದರೆ ಎಲ್ಲ ಮೀನುಗಾರ ಸಮಾಜದವರು, ಸಂಘಟನೆಗಳು ಮತ್ತು ಮಾರಾಟಗಾರು ಅವರ ಅಗತ್ಯ ಬೇಡಿಕೆಗಳ ಪಟ್ಟಿ ನೀಡಬೇಕು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.ಎರಡೂ ನಗರದಲ್ಲಿ ಮೀನುಗಾರರಿಗೆ ಸೂಕ್ತ ಮಾರುಕಟ್ಟೆ, ಶೈತ್ಯಾಗಾರ (ಕೋಲ್ಡ್‌ ಸ್ಟೋರೇಜ್), ವಿವಿಧ ಸಬ್ಸಿಡಿಗಳು ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಸಚಿವರು ಹಾಗೂ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry