ಎಕ್ಸಿಸ್ ಬ್ಯಾಂಕ್: ಗೃಹ ಸಾಲ ನಿಶ್ಚಿಂತ್

7

ಎಕ್ಸಿಸ್ ಬ್ಯಾಂಕ್: ಗೃಹ ಸಾಲ ನಿಶ್ಚಿಂತ್

Published:
Updated:

ನವದೆಹಲಿ (ಪಿಟಿಐ): ಹಬ್ಬದ ಹಿನ್ನೆಲೆಯಲ್ಲಿ ಎಕ್ಸಿಸ್ ಬ್ಯಾಂಕ್ ವಿಶೇಷ ಗೃಹ ಸಾಲ ಯೋಜನೆ `ನಿಶ್ಚಿಂತ್~ ಅನ್ನು ಪ್ರಕಟಿಸಿದೆ.ಈ ಯೋಜನೆಯಂತೆ ಗೃಹದ ಸಾಲದ ಮೇಲೆ ಶೇ 11.75ರಷ್ಟು ನಿಶ್ಚಿತ ಬಡ್ಡಿ ದರ ಅನ್ವಯವಾಗಲಿದೆ. ಸಾಲದ ಅವಧಿ ಮುಗಿಯುವವರೆಗೆ ಇದೇ ಬಡ್ಡಿ ದರ ಮುಂದುವರೆಯಲಿದೆ. 20 ವರ್ಷಗಳ ಅವಧಿ ವರೆಗಿನ, ್ಙ20 ಲಕ್ಷ ಮೊತ್ತದ ವರೆಗಿನ ಸಾಲಕ್ಕೆ ಈ ನಿಶ್ಚಿತ ಬಡ್ಡಿ ದರ ಅನ್ವಯಿಸಲಿದೆ ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ. ಸದ್ಯ ಶೇ 10.75ರಂತೆ ಬದಲಾಗುವ ಬಡ್ಡಿ ದರದಲ್ಲಿ ಎಕ್ಸಿಸ್ ಬ್ಯಾಂಕ್ ್ಙ25 ಲಕ್ಷ ಮೊತ್ತದ ವರೆಗೆ ಗೃಹ ಸಾಲ ನೀಡುತ್ತಿದೆ.ಭಾರತೀಯ ರಿಸರ್ವ್ ಬ್ಯಾಂಕ್ ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಗೃಹ ಸಾಲಗಳು ತುಟ್ಟಿಯಾಗಿದ್ದು, ಮಾಸಿಕ ಕಂತಿನ ಮೊತ್ತ (ಇಎಂಐ) ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಗೆ ನೆರವಾಗಲು `ನಿಶ್ಚಿಂತ್~ ಜಾರಿಗೊಳಿಸುತ್ತಿದ್ದೇವೆ ಎಂದು ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಆರ್.ಕೆ ಬಾಮಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry