ಮಂಗಳವಾರ, ನವೆಂಬರ್ 19, 2019
29 °C

`ಎಕ್ಸ್‌ಪ್ಯಾಡ್' ಅಗ್ಗದ ಟ್ಯಾಬ್ಲೆಟ್ ಮಾರುಕಟ್ಟೆಗೆ

Published:
Updated:

ಬೆಂಗಳೂರು: ಎಚ್‌ಸಿಎಲ್ ಇನ್ಫೊಸಿಸ್ಟಂನ ಅಂಗಸಂಸ್ಥೆ ಡಿಜಿಲೈಫ್ ಮತ್ತು ಟ್ಯಾಬ್ಲೆಟ್ ತಯಾರಿಕಾ ಕಂಪೆನಿ ಸಿಮ್‌ಟ್ರೊನಿಕ್ ಜಂಟಿಯಾಗಿ ಮಂಗಳವಾರ ಇಲ್ಲಿ `ಎಕ್ಸ್‌ಪ್ಯಾಡ್' ಸರಣಿಯ ಅಗ್ಗದ ದರದ ಟ್ಯಾಬ್ಲೆಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ಆಂಡ್ರಾಯ್ಡ ಕಾರ್ಯನಿರ್ವಹಣಾ ತಂತ್ರಾಂಶ ಹೊಂದಿರುವ 7 ಇಂಚಿನ ಪರದೆಯ `ಎಕ್ಸ್ 722' ಟ್ಯಾಬ್ಲೆಟ್‌ನ ಬೆಲೆ ರೂ 3990.  `2ಜಿ' ಕರೆ ಸೌಲಭ್ಯ  ಹೊಂದಿರುವ  `ಎಕ್ಸ್ 720' ಮಾದರಿ ದರ ರೂ 5999. ಇವೆರಡೂ ಟ್ಯಾಬ್ಲೆಟ್‌ಗಳಿಗೆ ಪತ್ರ್ಯೇವಾಗಿ ಕಿ-ಬೋರ್ಡ್ ಜೋಡಿಸಿಕೊಳ್ಳುವ ಸೌಲಭ್ಯ ಕಲ್ಪಿಸಲಾಗಿದೆ.`ಎಕ್ಸ್‌ಪ್ಯಾಡ್' ಸರಣಿಯ ಟ್ಯಾಬ್ಲೆಟ್‌ಗಳನ್ನು ಎರಡು ವರ್ಷಗಳ ಹಿಂದೆಯೇ ಮಧ್ಯಪ್ರಾಚ್ಯ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು. ಅಲ್ಲಿ ಉತ್ತಮ ಬೇಡಿಕೆ ವ್ಯಕ್ತವಾಗಿದೆ' ಎಂದು ಸಿಮ್‌ಟ್ರೊನಿಕ್ ಸಂಸ್ಥೆಯ ವ್ಯವಸ್ಥಾಪಕ ನೀರ್ದೇಶಕ ಇಂದ್ರಜಿತ್ ಸಬರ್‌ವಾಲ್ ಸುದ್ದಿ  ಗೋಷ್ಠಿಯಲ್ಲಿ ತಿಳಿಸಿದರು.ಕಂಪೆನಿಯು ಎರಿಕ್‌ಸನ್ ಸಹಭಾಗಿತ್ವದಲ್ಲಿ ಆಂಡ್ರಾಯ್ಡ ಕಾರ್ಯನಿರ್ವಹಣಾ ತಂತ್ರಾಂಶದ ಅಗ್ಗದ ದರದ ಸ್ಮಾರ್ಟ್ ಫೋನ್‌ಗಳನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರತಿಕ್ರಿಯಿಸಿ (+)