ಎಚ್ಎಎಲ್ ಇನ್ನು ಸಾರ್ವಜನಿಕ ಸಂಸ್ಥೆ?

7

ಎಚ್ಎಎಲ್ ಇನ್ನು ಸಾರ್ವಜನಿಕ ಸಂಸ್ಥೆ?

Published:
Updated:

ಬೆಂಗಳೂರು (ಐಎಎನ್ ಎಸ್): ದೇಶದ ರಕ್ಷಣಾ ಖಾತೆಯೊಂದಿಗೆ ಗುರುತಿಸಲಾದ,ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಎರೊನಾಟಿಕಲ್ ಲಿಮಿಟೆಡ್ (ಎಚ್ ಎ ಎಲ್) ಸಂಸ್ಥೆಯು, ತನ್ನ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರಲು, ಆಧುನಿಕತೆಯನ್ನು ರೂಢಿಸಲು ಇಷ್ಟರಲ್ಲೇ ಸಾರ್ವಜನಿಕರಿಂದ ಬಂಡವಾಳ ನಿಧಿ ಸಂಗ್ರಹಿಸಲು ಮುಂದಾಗಲಿದೆ. ಅದಕ್ಕಾಗಿ ಅದು ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ.

ಸದ್ಯ ಸಂಪೂರ್ಣವಾಗಿ ಸರ್ಕಾರದ  ಅಂಗ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಎಚ್ಎಎಲ್ ನಲ್ಲಿ ಸರ್ಕಾರದ ಪಾಲು ಎಷ್ಟಿರಬೇಕೆಂದು ಸರ್ಕಾರವೇ ನಿರ್ಧರಿಸಬೇಕಿದೆ ಎಂದು ಸಂಸ್ಥೆಯ ಹಣಕಾಸು ನಿರ್ದೇಶಕ ಡಿ.ಶಿವಮೂರ್ತಿ ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನಗರದಲ್ಲಿರುವ ಸರ್ಕಾರಿ ಸ್ವಾಮ್ಯದ ರಕ್ಷಣಾ ಇಲಾಖೆಗೆ ಸೇರಿದ ಭಾರತ್ ಎಲಿಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಮತ್ತು ಭಾರತ್ ಅರ್ಥ್ ಮೂವರ್ಸ್ (ಬಿಇಎಂಎಲ್) ಸಂಸ್ಥೆಗಳು ಬಹಳ ಸಮಯದ ಹಿಂದೆಯೇ ಬಂಡವಾಳ ನಿಧಿ ಸಂಗ್ರಹಣೆಗಾಗಿ ಸಾರ್ವಜನಿಕ ಕ್ಷೇತ್ರಕ್ಕೆ ಕಾಲಿಟ್ಟಿವೆ.

ಭಾರತೀಯ ವಾಯುಸೇನೆಗೆ ಅಗತ್ಯವಾಗಿರುವ ಯುದ್ಧ ವಿಮಾನ ಮತ್ತು ವೈಮಾನಿಕ ಸಾಧನಗಳ ಉತ್ಪಾದನೆಯಲ್ಲಿ ಏಕಸ್ವಾಮ್ಯ ಹೊಂದಿರುವ ಪ್ತತಿಷ್ಠಿತ ಎಚ್ಎಎಲ್ ಸಂಸ್ಥೆಯನ್ನು ಸಾರ್ವಜನಿಕ ಕ್ಷೇತ್ರಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಸರ್ಕಾರ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry